ಕಾಪು ಬಂಟರ ಸಂಘದ ವತಿಯಿಂದ ಅಗತ್ಯ ದಿನಬಳಗೆ ಆಹಾರ ಸಾಮಾಗ್ರಿ ವಿತರಣೆ.
ಕಾಪು ಬಂಟರ ಸಂಘದ ವತಿಯಿಂದ ಅಗತ್ಯ ದಿನಬಳಗೆ ಆಹಾರ ಸಾಮಾಗ್ರಿ ವಿತರಣೆ.
ಕಾಪು: ಕಾಪು ಬಂಟರ ಸಂಘದ ವತಿಯಿಂದ ಎಮ್.ಆರ್.ಜಿ ಗ್ರೂಪ್ನ ಆಡಳಿತ ನಿರ್ದೇಶಕರಾದ ಕೆ.ಪ್ರಕಾಶ್ ಶೆಟ್ಟಿಯವರು ನೀಡಿದ ಆಹಾರ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಕಾಪು ಬಂಟರ ಸಂಘದಲ್ಲಿ ನಡೆಯಿತು.
ಕಾಪು ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಆಹಾರ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು.
ತದನಂತರ ಮಾತನಾಡಿದ ಅವರು” ಕಾಪು ಬಂಟರ ಸಂಘ ಕಾಪು ತಾಲ್ಲೂಕಿನಲ್ಲಿ ಪ್ರಥಮವಾಗಿ ಈ ಯೋಜನೆಗೆ ಸಹಕರಿಸಿ ನಮ್ಮ ಜತೆ ಕೈಜೋಡಿಸಿ ಬಡ ಜನರ ಕೂಲಿಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಇದೊಂದು ಶ್ಲಾಘನೀಯ ಕಾರ್ಯ ಎಂದರು.
ಈ ಸಂಧರ್ಭದಲ್ಲಿ ಕಾಪು ಬಂಟರ ಸಂಘದ ಅಧ್ಯಕ್ಷ ವಾಸುದೇವ ಶೆಟ್ಟಿ ಗುರ್ಮೆ ಸುರೇಶ್ ಶೆಟ್ಟಿ,ಕಾಪು ಲೀಲಾಧರ ಶೆಟ್ಟಿ,ಯೋಗಿಶ್ ಶೆಟ್ಟಿ ಬಾಲಾಜಿ,ಕಾಪು ದೀವಾಕರ್ ಶೆಟ್ಟಿ,ರಘರಾಮ್ ಶೆಟ್ಟಿ,ಪುರಸಭಾ ಸದಸ್ಯ ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
