ಕಾಪು ಬೀಚ್ ನಲ್ಲಿ ಮತ್ತೆ ಅವಘಡ, ಸ್ನಾನಕ್ಕಿಳಿದ ವ್ಯಕ್ತಿ ನೀರು ಪಾಲು, ಮತ್ತೋರ್ವ ಗಂಭೀರ

desha, ಉಡುಪಿ

ಕಾಪು: ಪ್ರವಾಸಕ್ಕೆಂದು ಆಗಮಿಸಿದ್ದ ಮೂರು ಮಹಿಳೆಯರು ಮತ್ತು ನಾಲ್ಕು ಪುರುಷರು ಸೇರಿದಂತೆ ತಂಡ ಕಾಪು ಬೀ‍ಚ್ ನಲ್ಲಿ ಸಮುದ್ರಕ್ಕಿಳಿದು ಒಟ್ಟಿಗೆ ಏಳು ಮಂದಿ ನೀರಾಟದಲ್ಲಿ ತೊಡಗಿದ್ದ ಸಂಧರ್ಭದಲ್ಲಿ ಕಿಶೋರ್(೧೭ ವರ್ಷ) ಎಂಬಾತ ನೀರುಪಾಲಾಗಿದ್ದು, ಭರತ್ ಎಂತಾತನನ್ನು ರಕ್ಷಿಸಲಾಗಿದ್ದು ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೀಶೋರ್ ದೇಹಕ್ಕೆ ಹುಡುಕಾಟ ನಡೆಯುತ್ತಿದ್ದು ಕಾಪು ಪೋಲಿಸ್ ಸಿಬ್ಬಂದಿ ಸ್ಥಳದಲ್ಲಿ ಟಿಕಾಣಿ ಹೂಡಿದ್ದಾರೆ. ಹವಾಮಾನದ ಪರಿಸ್ಥಿತಿಯ ಕಾರಣದಿಂದಾಗಿ ಯುವಕರನ್ನು ಸಮುದ್ರದಲ್ಲಿ ಆಡಲು ತೊಡಗಿಸಬಾರದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆಂದು ಮೂಲಗಳು ತಿಳಿಸಿವೆ. ಕಾಪು ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.