ಕಾಪು : ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ : vishwanews24
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ರಚಿಸಿದ ಕಿಡಿಗೇಡಿಗಳು : vishwanews24
ಸೈಬರ್ ಕ್ರೈಮ್ ದೂರು ನೀಡಲು ಕ್ರಮ
ಕಾಪು: ಮಾನ್ಯ ವಿನಯ್ ಕುಮಾರ್ ಸೊರಕೆ, ಅಧ್ಯಕ್ಷರು (ಕೆಪಿಸಿಸಿ ಪ್ರಚಾರ ಸಮಿತಿ) ಮತ್ತು ಮಾಜಿ ಸಚಿವರ ಯವರ ಹೆಸರು ಬಳಸಿ ನಕಲಿ ಖಾತೆಯನ್ನು ಫೇಸ್ಬುಕ್ನಲ್ಲಿ ಸೃಷ್ಟಿಸಲಾಗಿದೆ ಮತ್ತು ಅದು ಜನರೊಂದಿಗೆ ಸಂಪರ್ಕಕ್ಕೆ ಬರುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ.


ಆ ಖಾತೆ ಯಾವುದೇ ವಿನಂತಿಗಳು ಅಥವಾ ಸಂದೇಶಗಳನ್ನು ಕಳುಹಿಸುತ್ತಿರುವ ಸಾಧ್ಯತೆ ಇದೆ. ಈ ಖಾತೆ ಸೊರಕೆಗೆ ಸಂಬಂಧಪಟ್ಟದ್ದು ಅಲ್ಲವೆಂಬುದನ್ನು ದಯವಿಟ್ಟು ಗಮನಿಸಬೇಕು ಮತ್ತು ಈ ರೀತಿಯ ಖಾತೆಯಿಂದ ನೀವು ಸಂಪರ್ಕಿಸಲ್ಪಟ್ಟರೆ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಸಂಬಂಧಿಸಬೇಡಿ.ಅಂತಹ ಖಾತೆಯನ್ನು ತಕ್ಷಣವೇ ಫೇಸ್ಬುಕ್ಗೆ ವರದಿ ಮಾಡಿ, ಯಾವುದೇ ಅಸಾಮಾನ್ಯ ವಿಷಯ ಗಮನಿಸಿದರೆ, ದಯವಿಟ್ಟು ನಮಗೆ ತಿಳಿಸಿ.ನಾವು ಈ ಸಮಸ್ಯೆಯನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ, ಆದರೆ ನಿಮ್ಮ ಜಾಗರೂಕತೆ ಮತ್ತು ಬೆಂಬಲ ನಮಗೆ ತುಂಬಾ ಅಗತ್ಯ ಎಂದು ಮಾಜಿ ಸಚಿವರ ಕಚೇರಿಯಿಂದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮೂಡಬಿದ್ರೆ : ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಂಶಯಾಸ್ಪದ ಸಾವು ; ಪ್ರಕರಣ ದಾಖಲು – vishwanews24
