ಕಾಪು ಮೂಳೂರು ದನದ ಮಾಂಸ ಸಾಗಿಸುತ್ತಿದ್ದವರನ್ನು ಬಂಧಿಸಿದ ಕಾಪು ಪೋಲಿಸರು.vishwanews24

Featured, ಉಡುಪಿ

ಕಾಪು: ದಿನಾಂಕ 08/04/2020 ರಂದು ರಾತ್ರಿ 9:00 ಗಂಟೆಗೆ ಇವರಿಗೆ ಸ್ಕೂಟರ್ ನಲ್ಲಿ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಮೂಳೂರು ಗ್ರಾಮದ ಗೋಲ್ಡನ್ ಜನರಲ್ ಸ್ಟೋರ್ ಸಮೀಪ ಮಂಗಳೂರು ಉಡುಪಿ ರಾ.ಹೆ 66 ರಲ್ಲಿ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ನಡೆಸುತ್ತಿರುವಾಗ  ರಾತ್ರಿ 09:15 ಗಂಟೆ ಸಮಯಕ್ಕೆ ಕಾಪು ಕಡೆಯಿಂದ ವಿರುದ್ದ ದಿಕ್ಕಿನಲ್ಲಿ ಆರೋಪಿಗಳ ಸ್ಕೂಟರ್ ನಂಬ್ರ KA-19-ET-4150 ಬಂದಿದ್ದು ಅವರುಗಳನ್ನು ನಿಲ್ಲಿಸಿ ವಿಚಾರಿಸಿದಲ್ಲಿ ಸ್ಕೂಟರ್ ಸವಾರ ತನ್ನ ಹೆಸರು ಮೊಹಮ್ಮದ್ ಸಫ್ವಾನ್ (23), ತಂದೆ: ರಫೀಕ್,ವಾಸ: 7 ನೇ ಬ್ಲಾಕ್ ಕೃಷ್ಣಪುರ ಸುರತ್ಕಲ್ ಮಂಗಳೂರು ಎಂದು ಸಹಸವಾರನನ್ನು ತನ್ನ ಹೆಸರು ಆಸ್ಗರ್ ಆಲಿ(39) ತಂದೆ: ಇದಿನಬ್ಬ, ವಾಸ: 7 ನೇ ಬ್ಲಾಕ್, ಕೃಷ್ಣಾಪುರ, ಸುರತ್ಕಲ್ ಮಂಗಳೂರು ಎಂದು ತಿಳಿಸಿದ್ದು ಸ್ಕೂಟರ್  ಪರಿಶೀಲಿಸಿದಲ್ಲಿ ಸ್ಕೂಟರ್ ನ ಸೀಟಿನ ಕೆಳಭಾಗದಲ್ಲಿ 7 ಪ್ಲಾಸ್ಟಿಕ್ ಕವರನಲ್ಲಿ ಮಾಂಸಗಳಿದ್ದು ಸದ್ರಿ ಮಾಂಸದ ಬಗ್ಗೆ ವಿಚಾರಿಸಿದಲ್ಲಿ ದನದ ಮಾಂಸವೆಂದು ತಿಳಿಸಿದ್ದು, ಮಾಂಸ ಸಾಗಾಟ ಬಗ್ಗೆ ಪರವಾನಿಗೆ ಇದೆಯೇ ಎಂದು ವಿಚಾರಿಸಿದಲ್ಲಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿದ್ದು ಆರೋಪಿಗಳನ್ನು ದಸ್ತಗಿರಿ ಮಾಡಿ, ದನದ ಮಾಂಸ ಸಾಗಾಟಕ್ಕೆ ಬಳಸಿದ ಸ್ಕೂಟರ್ ಒಂದೊಂದು ಕೆಜಿಯ 07 ಪ್ಲಾಸ್ಟಿಕ್ ಕವರ್ ಗಳಲ್ಲಿದ್ದ 07 ಕೆ.ಜಿ. ದನದ ಮಾಂಸವನ್ನು ಸ್ವಾಧೀನ ಪಡಿಸಿಕೊಂಡಿದ್ದು ಆರೋಪಿಗಳು ಕೋವಿದ್-19 (ಕರೋನಾ ವೈರಸ್)  ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಲಾಕ್ ಡೌನ್ ಆದೇಶ ಇದ್ದು ಯಾವುದೇ ಸಕಾರಣವಿಲ್ಲದೇ ಸಂಚರಿಸದಂತೆ ಸರಕಾರದ ಆದೇಶ ಇದ್ದರೂ ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಾಧ್ಯತೆ ಇದೆ ಎನ್ನುವ ವಿಷಯ ತಿಳಿದು ಸ್ಕೂಟರ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2020 ಕಲಂ: 269 ಐಪಿಸಿ., ಕಲಂ 11 ಕರ್ನಾಟಕ ಗೋಹತ್ಯಾ ಪ್ರತಿಬಂಧಕ ಮತ್ತು ಜನುವಾರು ಸಂರಕ್ಷಣಾ ಕಾಯ್ದೆ 1964 ಮತ್ತು ಸೆಕ್ಷನ್‌ 66 ಜೊತೆಗೆ 192(ಎ) ಐ.ಎಮ್.ವಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.