ಕಾಪು ಹೊಸ ಮಾರಿಗುಡಿ ದೇವಸ್ಥಾನ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ ಕಲ್ಯಾ ಆಯ್ಕೆ- vishwanews24
ಕಾಪು ಹೊಸ ಮಾರಿಗುಡಿ ದೇವಸ್ಥಾನ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ ಕಲ್ಯಾ ಆಯ್ಕೆ
ಕಾಪು:ಕಳೆದೊಂದು ವಾರದ ಹಿಂದೆ ಕರ್ನಾಟಕ ಸರ್ಕಾರ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಒಳಪಡುವ ಕಾಪು ಶ್ರೀ ಹೊಸ ಮಾರಿಯಮ್ಮ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆಗೆ ಸದಸ್ಯರ ಆಯ್ಕೆಯಾಗಿದ್ದು ಈ ಸಮಿತಿಯ ನೂತನ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ ಕಲ್ಯಾ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಕೆ ಶ್ರೀನಿವಾಸ ತಂತ್ರಿ, ಶ್ರೀಮತಿ ರೇಣುಕಾ ದೇವಾಡಿಗ ,ಶ್ರೀಮತಿ ಶೈಲಜಾ ಪುರುಷೋತ್ತಮ್, ಶ್ರೀ ಬಾಬು ಮಲ್ಲಾರು, ,ಶ್ರೀ ಗಂಗಾಧರ ಸುವರ್ಣ, ಶ್ರೀ ಜಗದೀಶ ಬಂಗೇರ ,ಶ್ರೀ ರವೀಂದ್ರ ಎಮ್, ಶ್ರೀ ಚಂದ್ರಶೇಖರ ಕೆ ಅಮೀನ್,ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಎಂದು ಪ್ರಕಟನೆ ತಿಳಿಸಿದೆ
