ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 200 ಅಂಕ ಕುಸಿತ -Vishwanews24

Featured, ರಾಷ್ಟ್ರ ನ್ಯೂಸ್

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 200 ಅಂಕ ಕುಸಿತ -Vishwanews24

ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ನೀರಸ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆ ಮೇಲಾಗಿದ್ದು, ಸೋಮವಾರದ (ಫೆ.22, 2021) ಆರಂಭಿಕ ವ್ಯವಹಾರದಲ್ಲಿ ಸಂವೇದಿ ಸೂಚ್ಯಂಕ 200ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿದೆ.

ಬಿಎಸ್ ಇ ಸಂವೇದಿ ಸೂಚ್ಯಂಕ 298.01 ಅಂಕಗಳ ಕುಸಿತದೊಂದಿಗೆ 50,591.75 ಅಂಕಗಳ ವಹಿವಾಟು ಆರಂಭಿಸಿದೆ. ಎನ್ ಎಸ್ ಇ ನಿಫ್ಟಿ 69 ಅಂಕಗಳ ಕುಸಿತದೊಂದಿಗೆ 14,912.80 ಅಂಕಗಳಷ್ಟು ಕೆಳಗಿಳಿದಿದೆ.

ಕಾಪು ಹೊಸ ಮಾರಿಗುಡಿ ದೇವಸ್ಥಾನ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಹೆಗ್ಡೆ ಕಲ್ಯಾ ಆಯ್ಕೆ- vishwanews24

ಷೇರು ಮೌಲ್ಯ ಕುಸಿತದಿಂದಾಗಿ ಎಲ್ ಆಯಂಡ್ ಟಿ, ಮಹೀಂದ್ರ ಆಯಂಡ್ ಮಹೀಂದ್ರ, ಡಾ.ರೆಡ್ಡೀಸ್, ಮಾರುತಿ, ಎಚ್ ಡಿಎಫ್ ಸಿ, ಟಿಸಿಎಸ್ ಹಾಗೂ ಬಜಾಜ್ ಆಟೋ ಷೇರುಗಳು ನಷ್ಟ ಅನುಭವಿಸಿದೆ.

ಏತನ್ಮಧ್ಯೆ ಒಎನ್ ಜಿಸಿ, ಎಚ್ ಡಿಎಫ್ ಸಿ ಬ್ಯಾಂಕ್, ಟೆಕ್ ಮಹೀಂದ್ರ ಮತ್ತು ಇನ್ಫೋಸಿಸ್ ಷೇರುಗಳು ಲಾಭ ಗಳಿಸಿವೆ. ಶುಕ್ರವಾರ(ಫೆ.19) ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ 434.93 ಅಂಕಗಳಷ್ಟು ಕುಸಿತದೊಂದಿಗೆ 50,889.76 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು.

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ ಪ್ರಕರಣಗಳು ಮತ್ತೆ ಹೆಚ್ಚಾದರೆ ಖಂಡಿತಾ ಲಾಕ್ ಡೌನ್ ಜಾರಿ ಮಾಡಲಾಗುತ್ತದೆ : ಸಿಎಂ ಉದ್ಧವ್ ಠಾಕ್ರೆ ಎಚ್ಚರಿಕೆ -Vishwanews24