ಕಾಪುವಿನ ಸರ್ಕಲ್ ಇನ್ಸ್‌ಪೆಕ್ಟರ್ ಹಾಲಮೂರ್ತಿ ರಾವ್ ವರ್ಗಾವಣೆ,ಮಹೇಶ್ ಪ್ರಸಾದ್ ನೇಮಕ.

Featured, ಉಡುಪಿ

ಕಾಪುವಿನ ಸರ್ಕಲ್ ಇನ್ಸ್‌ಪೆಕ್ಟರ್ ಹಾಲಮೂರ್ತಿ ರಾವ್ ವರ್ಗಾವಣೆ,ಮಹೇಶ್ ಪ್ರಸಾದ್ ನೇಮಕ.

ಕಾಪು: ಕಾಪುವಿನ ಈ ಹಿಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಹಾಲಮೂರ್ತಿ ರಾವ್ ಅವರಿಗೆ ಏಕಾಏಕಿ ವರ್ಗಾವಣೆಯಾಗಿ ಆ ಹುದ್ದೆಗೆ ಸೂಪರ್ ಕಾಪ್ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇಮಕವಾಗಿದ್ದಾರೆ.

ಪುತ್ತೂರು ಠಾಣೆಯಿಂದ ಕಾಪು ಪೋಲಿಸ್ ಠಾಣೆಗೆ ವರ್ಗಾವಣೆ ಗೊಂಡಿರುವ ಮಹೇಶ್ ಪ್ರಸಾದ್ ಕಾರವಾರ,ಹಿರಿಯಡ್ಕ, ಮಣಿಪಾಲ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಕಡೆ ಸೇವೆ ಸಲ್ಲಿಸಿದ ಕೀರ್ತಿ ಇವರದ್ದು.

ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಹು ಮುಖ್ಯ ಪಾತ್ರವಹಿಸಿದ್ದರು.

ದ.ಕ ಜಿಲ್ಲೆಯಲ್ಲೇ ಮೊದಲ ಭಾರಿಗೆ ಪುತ್ತೂರು ನಗರವನ್ನು ಸಿಸಿಕ್ಯಾಮರ ಅಳವಡಿಸಿ ಭದ್ರತೆ ಕಡೆ ಗಮನ ಹರಿಸಿದವರು.
ಅನೇಕ ಕೊಲೆ ಪ್ರಕರಣ , ದರೋಡೆ ಪ್ರಕರಣ , ಕಳ್ಳತನ ಪ್ರಕರಣ ಆರೋಪಿಗಳ ಬಂಧಿಸುವಲ್ಲಿ ಬಹು ಮುಖ ಪಾತ್ರ ಇವರದ್ದು.