ಕಾಸರಗೋಡು : ಮೀನುಗಾರಿಕೆ ಸಂದರ್ಭ ಸಿಡಿಲು ಬಡಿದು ಮೀನುಗಾರ ಸಾವು -Vishwanews24

Featured, ರಾಜ್ಯ ನ್ಯೂಸ್

ಕಾಸರಗೋಡು : ಮೀನುಗಾರಿಕೆ ಸಂದರ್ಭ ಸಿಡಿಲು ಬಡಿದು ಮೀನುಗಾರ ಸಾವು -Vishwanews24

ಕಾಸರಗೋಡು,: ಮೀನುಗಾರಿಕೆ ಸಂದರ್ಭದಲ್ಲಿ ಸಿಡಿಲು ಬಡಿದು ಮೀನುಗಾರರೊಬ್ಬರು ಮೃತಪಟ್ಟ ದಾರುಣ ಘಟನೆ ಏ.13ರ ಮಂಗಳವಾರ ಮುಂಜಾನೆ ಕಾಸರಗೋಡು ಸಮುದ್ರದಲ್ಲಿ ನಡೆದಿದೆ. ಮೃತಪಟ್ಟವರನ್ನು ಅಡ್ಕತ್ತಬೈಲ್ ಶ್ರೀ ಕುರುಂಭಾ ಕ್ಷೇತ್ರ ಸಮೀಪದ ಬಾಬು ರಾಜ್ ( 40) ಎಂದು ಗುರುತಿಸಲಾಗಿದೆ.

ಇವರೊಂದಿಗೆ ಮೀನುಗಾರಿಕೆಯಲ್ಲಿ ತೊಡಗಿದ್ದ ಕೃಷ್ಣ ಎಂಬವರು ಗಾಯಗೊಂಡಿದ್ದಾರೆ. ಮುಂಜಾನೆ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬಾಬು ರಾಜ್ , ಕೃಷ್ಣ , ಸುಜಿ ಮತ್ತು ಬಾಬು ಎಂಬವರು ಭಾಗ್ಯಲಕ್ಷ್ಮಿ ಎಂಬ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದರು.

ಬಿಜೆಪಿ ಪರವಾಗಿ ಜನಾಭಿಪ್ರಾಯ ಇಲ್ಲ, ಜನ ವಿರೋಧಿಗಳಾಗಿದ್ದಾರೆ : ಸಿದ್ದರಾಮಯ್ಯ -Vishwanews24

ಬೋಟು ಆಳಿವೆ ಬಾಗಿಲು ತಲಪುತ್ತಿದ್ದಂತೆ ಭಾರೀ ಗಾಳಿ , ಮಳೆ ಜೊತೆ ಮಿಂಚಿನ ಆರ್ಭಟ ಆರಂಭಿಸಿದ್ದು , ಮಿಂಚಿನಾಘಾತಕ್ಕೆ ಬಾಬು ರಾಜ್ ಕುಸಿದು ಬಿದ್ದಿದ್ದು , ಕೂಡಲೇ ಬೋಟ್ ನಲ್ಲಿದ್ದವರು ದಡಕ್ಕೆ ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ .

ಜಿಲ್ಲೆಯ ಹಲವೆಡೆ ಗಾಳಿ ಮಳೆ ಜೊತೆ ಗುಡುಗು ಮಿಂಚಿಗೆ ಅಪಾರ ಹಾನಿ ಉಂಟಾಗಿದೆ. ಕಾಸರಗೋಡು ,ಬದಿಯಡ್ಕ , ಪೆರ್ಲ, ಮುಳ್ಳೇರಿಯ , ಉದುಮ ಮೊದಲಾದೆಡೆ ಮಳೆಗೆ ಅಪಾರ ಹಾನಿ ಉಂಟಾಗಿದೆ. ಮಂಜೇಶ್ವರ ಉದ್ಯಾವರ ಸಮೀಪದ ಸತೀಶ್ ಚೌಟ , ಅಮಿರ್ ಅಲಿ ರವರ ತರಕಾರಿ ಕೃಷಿ ಹಾನಿಗೊಂಡಿದೆ. ಮಾನ್ಯ ಚುಕ್ಕಿನಡ್ಕದ ಕೊಗ್ಗು ಮಣಿಯಾಣಿ ರವರ ಪಂಪ್ ಶೆಡ್ ಸಿಡಿಲಿಗೆ ಹಾನಿಗೊಂಡಿದ್ದು , ಮನೆಯ ವಯರಿಂಗ್ ಉರಿದಿದೆ.

ರಾಜ್ಯ​ ಸ​ರ್ಕಾ​ರದ ಬೇಜ​ವಾ​ಬ್ದಾರಿ ನಡ​ವ​ಳಿಕೆ ಹಾಗೂ ಅವೈ​ಜ್ಞಾ​ನಿಕ ಕ್ರಮ​ಗ​ಳಿಂದಾಗಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಾರಣ : ಕುಮಾ​ರ​ಸ್ವಾಮಿ -Vishwanews24