ರಾಜ್ಯ​ ಸ​ರ್ಕಾ​ರದ ಬೇಜ​ವಾ​ಬ್ದಾರಿ ನಡ​ವ​ಳಿಕೆ ಹಾಗೂ ಅವೈ​ಜ್ಞಾ​ನಿಕ ಕ್ರಮ​ಗ​ಳಿಂದಾಗಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಾರಣ : ಕುಮಾ​ರ​ಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ರಾಜ್ಯ​ ಸ​ರ್ಕಾ​ರದ ಬೇಜ​ವಾ​ಬ್ದಾರಿ ನಡ​ವ​ಳಿಕೆ ಹಾಗೂ ಅವೈ​ಜ್ಞಾ​ನಿಕ ಕ್ರಮ​ಗ​ಳಿಂದಾಗಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಾರಣ : ಕುಮಾ​ರ​ಸ್ವಾಮಿ -Vishwanews24

ರಾಮ​ನ​ಗರ: “ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವಾಗಲೂ ರಾಜ್ಯ ಸರ್ಕಾರ ಹಾಗೂ ಚುನಾ​ವಣಾ ಆಯೋಗ ಲೋಕ​ಸಭೆ, ವಿಧಾ​ನ​ಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾ​ವಣೆ ಏಕೆ ಮುಂದೂ​ಡ​ಲಿಲ್ಲ” ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಪ್ರಶ್ನಿಸಿದ್ದಾರೆ.

ಈ ಕುರಿತು ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, “ರಾಜ್ಯ​ ಸ​ರ್ಕಾ​ರದ ಬೇಜ​ವಾ​ಬ್ದಾರಿ ನಡ​ವ​ಳಿಕೆ ಹಾಗೂ ಅವೈ​ಜ್ಞಾ​ನಿಕ ಕ್ರಮ​ಗ​ಳಿಂದಾಗಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿ​ಸುವ ನಿಟ್ಟಿ​ನಲ್ಲಿ ಹಲ​ವಾರು ನಿಯ​ಮ​ಗ​ಳನ್ನು ಜಾರಿಗೆ ತಂದಿದೆ. ಹೀಗಿ​ದ್ದರೂ ನಿಯ​ಮ​ಗ​ಳನ್ನು ಉಲ್ಲಂಘಿಸಿ ಲೋಕ​ಸಭೆ, ವಿಧಾ​ನ​ಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾ​ವ​ಣೆ​ ಪ್ರಚಾ​ರ​ದಲ್ಲಿ ಅನೇಕ ಜನರು ಸೇರು​ತ್ತಿ​ದ್ದು, ಈ ವೇಳೆ ಚುನಾ​ವಣೆ ಏಕೆ ಘೋಷಣೆ ಮಾಡ​ಬೇ​ಕಾ​ಗಿತ್ತು” ಎಂದು ಪ್ರಶ್ನಿಸಿದ್ದಾರೆ.

ರೈಲು ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಪ್ರಯಾಣಿಸುವ ಮುನ್ನ ಕೋವಿಡ್ ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳಿ..Vishwanews24

ಇನ್ನು “ಸಾರಿಗೆ ನೌಕ​ರರ ವಿಚಾ​ರ​ದಲ್ಲಿ ರಾಜ್ಯ ಸರ್ಕಾರ ಬಿಗಿ ಧೋರಣೆ ಅನು​ಸ​ರಿ​ಸು​ವುದು ಸರಿ​ಯಲ್ಲ, ಮುಖ್ಯ​ಮಂತ್ರಿ ಯಡಿ​ಯೂ​ರ​ಪ್ಪ​ರ​ವರು ನೌಕ​ರರ ಸಮಸ್ಯೆ ಬಗೆ​ಹ​ರಿ​ಸಲು ಸಾಧ್ಯ​ವಾ​ಗ​ದಿ​ದ್ದರೆ ಅವ​ರೊಂದಿಗೆ ಗೌರ​ವ​ಯು​ತ​ವಾಗಿ ಚರ್ಚಿಸಿ ಕಾಲಾ​ವ​ಕಾಶ ಕೇಳ​ಬೇಕು. ಮುಖ್ಯ​ಮಂತ್ರಿ​ಗಳು ಸಾರಿಗೆ ನೌಕ​ರ​ರೊಂದಿಗೆ ಚರ್ಚಿ​ಸುವ ಸೌಜ​ನ್ಯ​ವನ್ನು ತೋರದೆ ಕಾನೂ​ನಿನ ಮೂಲಕ ಹೆದ​ರಿ​ಸು​ತ್ತೇವೆ ಎನ್ನುವುದು ಸರಿ​ಯಲ್ಲ” ಎಂದಿದ್ದಾರೆ.

ಮಂಗಳೂರು: ಮೀನುಗಾರಿಕಾ ಬೋಟ್‌ ಅಪಘಾತ – 2 ಮೀನುಗಾರ ಮೃತ್ಯು, 12 ಮಂದಿ ನಾಪತ್ತೆ -Vishwanews24