ಕುವೈಟ್‌ನಲ್ಲಿ ಹೃದಯಾಘಾತ – ಮಗಳ ಮದುವೆ ತಯಾರಿಯಲ್ಲಿದ್ದ ಕೋಟದ ವ್ಯಕ್ತಿ ನಿಧನ – Vishwanews24
ಕುವೈಟ್‌ನಲ್ಲಿ ಹೃದಯಾಘಾತ – ಮಗಳ ಮದುವೆ ತಯಾರಿಯಲ್ಲಿದ್ದ ಕೋಟದ ವ್ಯಕ್ತಿ ನಿಧನ
ಕೋಟ: ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮದ ದಿ| ಜಿ. ಕೆ. ಹಸನಬ್ಬ ಅವರ ಪುತ್ರ ಜಲಾಲ್ (55) ಮಾ. 9ರಂದು ಸಂಜೆ ಕುವೈಟ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹಲವು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು, ಮಗಳ ಮದುವೆಗಾಗಿ ಇನ್ನು ಹತ್ತು ದಿನದಲ್ಲಿ ಊರಿಗೆ ಬರುವ ತಯಾರಿಯಲ್ಲಿದ್ದರು. ಆದರೆ ಈ ನಡುವೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅಯೋಧ್ಯೆಯಲ್ಲಿ ಹೃದಯಾಘಾತ – ಉಡುಪಿಯ ಪಾಂಡುರಂಗ ಶಾನುಭೋಗ್ ನಿಧನ – Vishwanews24
ವಿಷಯ ತಿಳಿದ ಮನೆಯವರ ರೋಧನ ಮುಗಿಲು ಮುಟ್ಟಿದೆ. ಸೋಮವಾರ ಮೃತದೇಹ ತಾಯ್ನಾಡಿಗೆ ತಲುಪಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
