ಕೇಂದ್ರ ಸರ್ಕಾರ ಕಿತ್ತೊಗೆಯಲು ರೈತರ ತೀರ್ಮಾನ ಮಾಡಿದ್ದಾರೆ, ದೇಶದಲ್ಲಿ ಅರಾಜಕತೆ ಸೃಷ್ಠಿಯಾಗಿದೆ : ಸಿದ್ದರಾಮಯ್ಯ -Vishwanews24

Featured, ರಾಜ್ಯ ನ್ಯೂಸ್

ಕೇಂದ್ರ ಸರ್ಕಾರ ಕಿತ್ತೊಗೆಯಲು ರೈತರ ತೀರ್ಮಾನ ಮಾಡಿದ್ದಾರೆ, ದೇಶದಲ್ಲಿ ಅರಾಜಕತೆ ಸೃಷ್ಠಿಯಾಗಿದೆ : ಸಿದ್ದರಾಮಯ್ಯ -Vishwanews24

ಬೆಂಗಳೂರು : ಕೇಂದ್ರ ಸರ್ಕಾರ ಕಿತ್ತೊಗೆಯಲು ರೈತರ ತೀರ್ಮಾನ ಮಾಡಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಠಿಯಾಗಿದೆ. ರೈತರ ವಿರುದ್ಧದ ಕಾಯ್ದೆ ಯಾಕೆ ತಂದಿದ್ದೀರಿ.? 58 ದಿನಗಳಿಂದ ರೈತರು ಪ್ರತಿಭಟನೆ ಮಾಡಿದ್ದಾರೆ. ಚಳಿಯಲ್ಲೇ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಮನುಷ್ಯತ್ವ ಇದ್ರೆ ಹೋರಾಟ ಹತ್ತಿಕ್ಕಬಾರದು. ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿದೆ. ರೈತರ ಬೇಡಿಕೆ ನ್ಯಾಯಯುತವಾಗಿದೆ. ರೈತರ ಪರವಾಗಿ ನಾನು ಜೈಲಿಗೆ ಹೋಗಲು ಸಿದ್ಧ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಸರ್ಕಾರ ತನ್ನ ಅಹಂಕಾರಕ್ಕೆ ಅತೀ ಶೀಘ್ರದಲ್ಲಿಯೇ ತಕ್ಕ ಪ್ರತಿಫಲ ಅನುಭವಿಸಲಿದೆ : ಪ್ರಿಯಾಂಕ್ ಖರ್ಗೆ -Vishwanews24

ಫ್ರೀಡಂ ಪಾರ್ಕ್ ನಲ್ಲಿ ರಾಜಭವನ ಮುತ್ತಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ನಮ್ಮ ಹೋರಾಟ ರಾಜಭವನಕ್ಕೆ ಮುತ್ತಿಗೆ ಆಗಿದೆ. ನಮ್ಮ ಹೋರಾಟ ಭಾಷಣಕ್ಕೆ ಸೀಮಿತ ಅಲ್ಲ. ರಾಜಭವನಕ್ಕೆ ನಾವು ಮುತ್ತಿಗೆ ಹಾಕುತ್ತೇವೆ. ನಮ್ಮ ಹೋರಾಟ ಈಗ ಪ್ರಾರಂಭ ಆಗಿದೆ. ರೈತರ ಪರವಾಗಿ ಜೈಲಿಗೆ ಹೋಗಲು ಸಹ ಸಿದ್ಧ ಎಂದು ಹೇಳಿದ್ದಾರೆ.

ಫೆ. 26ರಿಂದ ಮಾಚ್೯ 2ರವರೆಗೆ ದೇಯಿ ಬೈದ್ಯೆತಿ – ಕೋಟಿ ಚೆನ್ನಯರ ಪುಣ್ಯ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ಜಾತ್ರಾ ಮಹೋತ್ಸವ -Vishwanews24

ಇನ್ನೂ ಮುಂದುವರೆದು ಮಾತನಾಡಿದ ಅವರು, ಕೃಷಿ ನೀತಿ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ರೈತರು ದಂಗೆ ಏಳಲು ಅವಕಾಶ ಕೊಡಬೇಡಿ. ಕೂಡಲೇ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಿರಿ ಎಂಬುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ದಿಲ್ಲಿಯಿಂದ ಹಳ್ಳಿಯವರೆಗೆ ಬಿಜೆಪಿ ಬಲಿಷ್ಟ: ಬಿ.ವೈ ರಾಘವೇಂದ್ರ -Vishwanews24