ಗುಡ್ ನ್ಯೂಸ್: ಐದು ನೂರಕ್ಕೆ ಸಿಗಲಿದೆ ಎಲ್ ಪಿ ಜಿ ಸಿಲಿಂಡರ್

desha, Featured, ವಿಶೇಷ ಲೇಖನಗಳು

ಬಹುತೇಕ ಪ್ರತಿಯೊಬ್ಬರ ಮನೆಯಲ್ಲೂ ಈಗ ಎಲ್ ಪಿ ಜಿ ಸಿಲಿಂಡರ್ ಇದೆ. ಸಿಲಿಂಡರ್ ಇಲ್ಲದೆ ಅಡುಗೆ ಮಾಡೋದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಎಲ್ ಪಿ ಜಿ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಸಿಲಿಂಡರ್ ಬೆಲೆ 1000 ಗಡಿ ದಾಟಿದ್ದು, ಬಡ, ಮಧ್ಯಮ ವರ್ಗದ ಜನರು ಕಣ್ಣೀರಿಡುವಂತಾಗಿದೆ.

ಜನ ಸಾಮಾನ್ಯರ ಸಮಸ್ಯೆಯನ್ನು ಅರಿತಿರುವ ಕೇಂದ್ರ ಸರ್ಕಾರ ಸಿಲಿಂಡರ್ ಭಾರವನ್ನು ಇಳಿಸಲು ಯೋಜನೆ ರೂಪಿಸುತ್ತಿದೆ. ಮಾಧ್ಯಮಗಳ ವರದಿ ಪ್ರಕಾರ, ಕೇಂದ್ರ ಸರ್ಕಾರ ಡಿಬಿಟಿ (ನೇರ ಲಾಭದ ವರ್ಗಾವಣೆ) ವ್ಯವಸ್ಥೆಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಕೇಂದ್ರ ಸರ್ಕಾರ ಎಲ್ ಪಿ ಜಿ ಸಿಲಿಂಡರ್ ಮೇಲೆ ಸಬ್ಸಿಡಿ ನೀಡುತ್ತಿದೆ. ಆದ್ರೆ ಗ್ರಾಹಕರು ಮೊದಲು ಸಿಲಿಂಡರ್ ನ ಪೂರ್ಣ ಹಣವನ್ನು ಪಾವತಿ ಮಾಡಬೇಕು. ನಂತ್ರ ಬ್ಯಾಂಕ್ ಫಲಾನುಭವಿ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ. ಇದು ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ.

ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಯೋಜನೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. ಹೊಸ ನಿಯಮದ ಪ್ರಕಾರ ಗ್ರಾಹಕರ ಸಬ್ಸಿಡಿ ಹಣ ನೇರವಾಗಿ ಪೆಟ್ರೋಲಿಯಂ ಕಂಪನಿಗಳ ಖಾತೆ ಸೇರಲಿದೆ. ಇದಕ್ಕಾಗಿ ಸರ್ಕಾರ ಹೊಸ ಸಿಸ್ಟಂ ಜಾರಿಗೆ ಬರ್ತಿದೆ. ಅದ್ರ ಪ್ರಕಾರ ನೀವು ಗ್ಯಾಸ್ ಬುಕ್ ಮಾಡ್ತಿದ್ದಂತೆ ನಿಮ್ಮ ಮೊಬೈಲ್ ಗೆ ಕೋಡ್ ಬರಲಿದೆ. ಮನೆಗೆ ಸಿಲಿಂಡರ್ ನೀಡಲು ಬಂದ ವ್ಯಕ್ತಿಗೆ ಈ ಕೋಡ್ ನೀಡಬೇಕು. ಆತ ಸಿಸ್ಟಂನಲ್ಲಿ ಈ ಕೋಡನ್ನು ನಮೂದಿಸುತ್ತಾನೆ. ಆಗ ನಿಮ್ಮ ಸಬ್ಸಿಡಿ ಹಣ ನೇರವಾಗಿ ಪೆಟ್ರೋಲಿಯಂ ಕಂಪನಿಗಳ ಬ್ಯಾಂಕ್ ಖಾತೆಗೆ ಹೋಗಲಿದೆ. ಗ್ರಾಹಕರು ಕೇವಲ ಸಬ್ಸಿಡಿ ಬೆಲೆಯನ್ನು ಮಾತ್ರ ಪಾವತಿಸಿದ್ರೆ ಸಾಕು. ಸದ್ಯ 1000 ರೂಪಾಯಿಯಾಗಿರುವ ಸಿಲಿಂಡರ್ ಬೆಲೆ ಹೊಸ ನಿಯಮ ಜಾರಿಗೆ ಬಂದ್ರೆ 507 ರೂಪಾಯಿಯಾಗಲಿದೆ.