ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸಿಎಂ ಬೊಮ್ಮಾಯಿ : ನಿರ್ವಹಣಾ ಸಮಿತಿ ಸಂಚಾಲಕರಾಗಿ ಶೋಭಾ ಕರಂದ್ಲಾಜೆ ನೇಮಕ – Vishwanews24

Featured, ರಾಜ್ಯ ನ್ಯೂಸ್

ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸಿಎಂ ಬೊಮ್ಮಾಯಿ; ನಿರ್ವಹಣಾ ಸಮಿತಿ ಸಂಚಾಲಕರಾಗಿ ಶೋಭಾ ಕರಂದ್ಲಾಜೆ ನೇಮಕ

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ರಾಜಕೀಯ ನಾಯಕರ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದ್ದರೆ, ಇನ್ನು ಕೆಲವರು ತಮ್ಮ ಕ್ಷೇತ್ರಗಳನ್ನ ಭದ್ರಗೊಳಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದು, ಜೆಡಿಎಸ್‌ ಗೆಲ್ಲಿಸಲು ತೀರ್ಮಾನ ಕೈಗೊಡಿದ್ದಾರೆ : ನಿಖಿಲ್‌ ಕುಮಾರಸ್ವಾಮಿ – Vishwanews24

ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ನೇಮಿಸಲಾಗಿದೆ. ಹಾಗೇ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾಗಿ ಶೋಭಾ ಕರಂದ್ಲಾಜೆ ನೇಮಕ ಮಾಡಲಾಗಿದೆ.ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯಲ್ಲಿ 25 ನಾಯಕರಿಗೆ ಸ್ಥಾನ ಸಿಗಲಿದೆ.25 ಜನರ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮತ್ತು ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಸ್ಥಾನ ನೀಡಲಾಗಿದೆ.ಇನ್ನು ಚುನಾವಣಾ ನಿರ್ವಹಣಾ ಸಮಿತಿಯಲ್ಲಿ 14 ನಾಯಕರನ್ನು ನೇಮಕ ಮಾಡಲಾಗಿದ್ದು, ಇದರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್​​ಗೆ ಸ್ಥಾನ ನೀಡಲಾಗಿದೆ.

BSF ನಲ್ಲಿ ಮಾಜಿ ಅಗ್ನಿವೀರ್‌ಗಳಿಗೆ 10% ಮೀಸಲಾತಿ: ಕೇಂದ್ರ ಸರ್ಕಾರ ಘೋಷಣೆ – Vishwanews24

Leave a Reply