ಚೈತ್ರಾ ಎ. ಸಾಲ್ಯಾನ್ ಎರ್ಮಾಳುಗೆ ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಪಿಯನ್‍ಶಿಪ್‍ನಲ್ಲಿ 2 ಚಿನ್ನದ ಪದಕ

Featured, ಉಡುಪಿ

ಚೈತ್ರಾ ಎ. ಸಾಲ್ಯಾನ್ ಎರ್ಮಾಳುಗೆ ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಪಿಯನ್‍ಶಿಪ್‍ನಲ್ಲಿ 2 ಚಿನ್ನದ ಪದಕ

ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕರಾಟೆ ಸಾಧಕಿ ಚೈತ್ರಾ ಎ. ಸಾಲ್ಯಾನ್ ಎರ್ಮಾಳು ಅವರು ಮೇ 6ರಂದು ಶ್ರೀಲಂಕಾದ ಕ್ಯಾಂಡಿಯ ಯುನಿವರ್ಸಿಟಿ ಆಫ್ ಪೆರ್ಡೇನಿಯಾದ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ 16ನೇ ಟೆನ್ಶಿನ್ ಕಪ್ ಅಂತಾರಾಷ್ಟ್ರೀಯ ಕರಾಟೆ ಚಾಪಿಯನ್‍ಶಿಪ್‍ನಲ್ಲಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಸ್ಪರ್ಧಿಸಿ 2 ಚಿನ್ನದ ಪದಕಗಳನ್ನು ಗೆದ್ದಿರುತ್ತಾರೆ.
ಕೊನೆ ಸುತ್ತಿನಲ್ಲಿ ನೇಪಾಲ ಮತ್ತು ಕಜಕಿಸ್ತಾನ ತಂಡದ ಎದುರಾಳುವನ್ನ ಸೋಲಿಸಿ ಜಯಶಾಲಿಯಾದರು.

ಈಕೆ ಎರ್ಮಾಳು ಅಶೋಕ್ ಸಾಲ್ಯಾನ್, ಶ್ರೀಮತಿ ಸಾಲ್ಯಾನ್ ದಂಪತಿ ಪುತ್ರಿ. ಕಾಪು ವಿದ್ಯಾನಿಕೇತನ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ. ಕರಾಟೆ ಶಿಕ್ಷಕ ಸತೀಶ್ ಪೂಜಾರಿ ಬೆಳ್ಮಣ್ಣು ಅವರಿಂದ ತರಬೇತಿ ಪಡೆಯುತ್ತಿದ್ದಾರೆ.