ಜ. 6ರಿಂದ ಮತ್ಸ್ಯಗಂಧ ಸೂಪರ್‌ಫಾಸ್ಟ್ ರೈಲು ಎಕ್ಸ್‌ಪ್ರೆಸ್ ರೈಲಾಗಿ ಸಂಚಾರ – vishwanews24
ಜ. 6ರಿಂದ ಮತ್ಸ್ಯಗಂಧ ಸೂಪರ್‌ಫಾಸ್ಟ್ ರೈಲು ಎಕ್ಸ್‌ಪ್ರೆಸ್ ರೈಲಾಗಿ ಸಂಚಾರ ; ಟಿಕೆಟ್ ದರದಲ್ಲೂ ಕಡಿತ
ಉಡುಪಿ: ಮುಂಬಯಿ ಲೋಕಮಾನ್ಯ ತಿಲಕ್ ಟರ್ಮಿನಲ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಸೂಪರ್ ಫಾಸ್ಟ್ ರೈಲಾಗಿ ಸಂಚರಿಸುತಿದ್ದ ಮತ್ಸ್ಯಗಂಧ ಸೂಪರ್‌ಫಾಸ್ಟ್ ರೈಲು ಮುಂದಿನ ಜನವರಿ 6ರಿಂದ ಬದಲಾದ ನಂಬರ್‌ನೊಂದಿಗೆ ಎಕ್ಸ್‌ಪ್ರೆಸ್ ರೈಲಾಗಿ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಸೂಪರ್‌ಫಾಸ್ಟ್‌ನಿಂದ ಎಕ್ಸ್‌ಪ್ರೆಸ್ ರೈಲಾಗಿ ಪರಿವರ್ತನೆ ಹೊಂದಿದ ಕಾರಣ ಟಿಕೇಟ್ ದರದಲ್ಲೂ ಕಡಿತವಾಗಲಿದೆ. ರೈಲು ನಂ.12619 ಆಗಿ ಲೋಕಮಾನ್ಯ ತಿಲಕ್- ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ಮತ್ಸ್ಯಗಂಧ ಸೂಪರ್‌ಫಾಸ್ಟ್ ರೈಲು 2027ರ ಜನವರಿ 6ರಿಂದ ರೈಲು ನಂ. 16369 ಆಗಿ ಲೋಕಮಾನ್ಯತಿಲಕ್- ಮಂಗಳೂರು ಸೆಂಟ್ರಲ್ ನಡುವೆ ಎಕ್ಸ್‌ಪ್ರೆಸ್ ರೈಲಾಗಿ ಸಂಚರಿಸಲಿದೆ.
ಇದನ್ನೂ ಓದಿ :
ಬೆಳ್ತಂಗಡಿ : ಸರಣಿ ಅಪಘಾತ ; ಇಬ್ಬರು ದ್ವಿಚಕ್ರ ವಾಹನ ಸವಾರರು ಸಾವು – vishwanews24
ಅದೇ ರೀತಿ ರೈಲು ನಂ.12620 ಆಗಿ ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ನಡುವೆ ಸಂಚರಿಸುವ ಸೂಪರ್ ಫಾಸ್ಟ್ ರೈಲು ಜನವರಿ 6ರಿಂದ ರೈಲು ನಂ.16370 ಆಗಿ ಮಂಗಳೂರು ಸೆಂಟ್ರಲ್‌ನಿಂದ ಮುಂಬಯಿಗೆ ಎಕ್ಸ್‌ಪ್ರೆಸ್ ರೈಲಾಗಿ ಓಡಾಟ ನಡೆಸಲಿದೆ.
ಇದರೊಂದಿಗೆ ರೈಲು ನಂ.12201 ಲೋಕಮಾನ್ಯ ತಿಲಕ್- ತಿರುವನಂತಪುರಂ ನಾರ್ತ್ ನಡುವೆ ಸಂಚರಿಸುವ ಗರೀಬ್ ರಥ್ ಸೂಪರ್ ಫಾಸ್ಟ್ ರೈಲು 2027ರ ಜನವರಿ 4ರಿಂದ ರೈಲು ನಂ.16371 ಎಕ್ಸ್‌ಪ್ರೆಸ್ ರೈಲಾಗಿ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ :
