ಜೊತೆ ಜೊತೆಯಲಿ ನಾಯಕ ನಟ ಅನಿರುದ್ಧ್ ಗೆ 2 ವರ್ಷಗಳ ಕಾಲ ನಿಷೇಧ ಹೇರಿದ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ – Vishwanews24
ಜೊತೆ ಜೊತೆಯಲಿ ನಾಯಕ ನಟ ಅನಿರುದ್ಧ್ ಗೆ 2 ವರ್ಷಗಳ ಕಾಲ ನಿಷೇಧ ಹೇರಿದ ಕನ್ನಡ
ಕಿರುತೆರೆ ನಿರ್ಮಾಪಕರ ಸಂಘ ..
ಕಿರುತೆರೆಯ ಯಾವುದೇ ಕಾರ್ಯಕ್ರಮಗಳಲ್ಲಿ ಅನಿರುದ್ಧ್ಗೆ ಅವಕಾಶ ಕೊಡದಂತೆ ನಿರ್ಧಾರ..
ಬೆಂಗಳೂರು : ಕನ್ನಡ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ ’ಧಾರವಾಹಿಯ ನಾಯಕ ನಟ ಅನಿರುದ್ಧ್ ಅವರ ಮೇಲೆ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ 2 ವರ್ಷಗಳ ಕಾಲ ನಿಷೇಧ ಹೇರಿದೆ.

ಧಾರಾವಾಹಿಯ ನಿರ್ಮಾಪಕ ಅರೂರು ಜಗದೀಶ್ ದೂರಿನ ಮೇರೆಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಧಾರಾವಾಹಿ ನಿರ್ಮಾಪಕರೆಲ್ಲರೂ ಒಕ್ಕೊರಲಿನಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಕಿರುತೆರೆಯ ಯಾವುದೇ ಕಾರ್ಯಕ್ರಮಗಳಲ್ಲಿ ಅನಿರುದ್ಧ್ಗೆ ಅವಕಾಶ ಕೊಡದಂತೆ ನಿರ್ಧರಿಸಲಾಗಿದೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ತಿಳಿಸಿದ್ದಾರೆ.

ಡೈಲಾಗ್ ಬದಲಿಸುವಂತೆ ಸ್ಕ್ರೀಪ್ಟ್ ಬದಲಿಸುವಂತೆ ನಟ ಅನಿರುದ್ಧ್ ಮೂಗುತೂರಿಸುತ್ತಾರೆ ಎನ್ನಲಾಗಿದ್ದು, ಇದಲ್ಲದೇ ತಂತ್ರಜ್ಞರ ತಂಡ ಮುನಿಸಿಕೊಂಡಿದೆ ಎನ್ನಲಾಗಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ “ನಿಷೇಧ” ಇಂತಹ ಕ್ರಮಕ್ಕೆ ಯಾವುದೇ ಅವಕಾಶವಿಲ್ಲ. ಮೆಗಾ ಸೀರಿಯಲ್ ಸೆಟ್ಗಳಲ್ಲಿ ಈ ರೀತಿ ಘಟನೆ ಸರ್ವೆ ಸಾಮಾನ್ಯ. ಒಂದು ವೇಳೆ ಧಾರವಾಹಿ ಪ್ರಸಾರ ಆಗುತ್ತಿರುವ ಚಾನೆಲ್ ಕಲಾವಿದನನ್ನು ನಿಷೇಧಿಸಬಹುದು. ಇದರ ಹೊರತಾಗಿ ಏಕಾಏಕಿ ಯಾರನ್ನು ಬ್ಯಾನ್ ಮಾಡುವ ಅವಕಾಶ ಇಲ್ಲಅವುಗಳನ್ನೆಲ್ಲಾ ಕೂತು ಅವರೇ ಬಗೆಹರಿಸಿಕೊಳ್ಳಬೇಕು ಎಂದು ಟೆಲಿವಿಷನ್ ಅಸೋಸಿಯೇಷನ್ ಹೇಳಿಕೊಂಡಿದೆ.
