ಟೋಕಿಯೋ : ಕಂಚಿನ ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡ -Vishwanews24

Featured, ರಾಷ್ಟ್ರ ನ್ಯೂಸ್

ಟೋಕಿಯೋ : ಕಂಚಿನ ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡ -Vishwanews24

41 ವರ್ಷದ ಬಳಿಕ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡ 

ಟೋಕಿಯೋ: ಭಾರತದ ಪುರುಷರ ಹಾಕಿ ತಂಡ 41 ವರ್ಷದ ಬಳಿಕ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದುಕೊಂಡಿದೆ. ಜರ್ಮನಿ ತಂಡವನ್ನು 5-4 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದೆ.

1980ರ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ಭಾರತ ಪದಕ ಪಡೆದುಕೊಂಡಿತ್ತು. ಅಂದು ವಾಸುದೇವನ್ ಭಾಸ್ಕರ್ ನಾಯಕತ್ವದಲ್ಲಿ ಆಡಿದ್ದ ಟೀಂ ಇಂಡಿಯಾ ಚಿನ್ನಕ್ಕೆ ಮುತ್ತಿಕ್ಕಿತ್ತು. ಇಂದು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.