ಡಿ.ಕೆ.ಶಿವಕುಮಾರ್ ಅವರು ನಮ್ಮ ನಾಯಕ ಅವರಿಗೇನಾದ್ರೂ ಆದ್ರೆ ಅದಕ್ಕೆ ನೇರ ಹೊಣೆ ಕೇಂದ್ರ ಸರ್ಕಾರ : ಮಿಥುನ್ ರೈ ಎಚ್ಚರಿಕೆ -Vishwanews24

Featured, ದಕ್ಷಿಣ ಕನ್ನಡ

ನವದೆಹಲಿ: ಡಿ.ಕೆ.ಶಿವಕುಮಾರ್ ಅವರು ನಮ್ಮ ನಾಯಕ ಅವರಿಗೇನಾದ್ರೂ ಆದ್ರೆ ಅದಕ್ಕೆ ನೇರ ಕೇಂದ್ರ ಸರ್ಕಾರ ಹೊಣೆ ಮತ್ತು ಇಡಿ ಅಧಿಕಾರಿಗಳು ಕೂಡಾ ಕಾರಣಕರ್ತರಾಗುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚು ಕಡಿಮೆ ಆದ್ರೆ ಇದಕ್ಕೆ ನೇರವಾಗಿ ಕೇಂದ್ರ ಸರ್ಕಾರ ಹಾಗೂ ಅಕ್ರಮ ಹಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ (ಇ.ಡಿ) ಕಾರಣ ಎಂದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ದಾಖಲಾಗಿರುವ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಥುನ್ ರೈ, ಡಿ.ಕೆ.ಶಿವಕುಮಾರ್ ಅವರು ನಮ್ಮ ನಾಯಕ ಅವರಿಗೇನಾದ್ರೂ ಆದ್ರೆ ಅದಕ್ಕೆ ನೇರ ಕೇಂದ್ರ ಸರ್ಕಾರ ಹೊಣೆ ಮತ್ತು ಇಡಿ ಅಧಿಕಾರಿಗಳು ಕೂಡಾ ಕಾರಣಕರ್ತರಾಗುತ್ತಾರೆ ಎಂದು ಕಿಡಿಕಾರಿದರು.