ನನಗೆ ಈಗಾಗಲೇ ಮದುವೆಯಾಗಿದೆ – ರಾಹುಲ್​ ಗಾಂಧಿ

Featured, ರಾಜ್ಯ ನ್ಯೂಸ್

ಹೈದರಾಬಾದ್​ : ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿ ಮದುವೆ ಬಗ್ಗೆ ಊಹಾಪೋಹಗಳು ಹಲವು ವರ್ಷಗಳಿಂದ ಕೇಳಿ ಬರುತ್ತಿವೆ. ಆದರೆ ರಾಹುಲ್​ ಗಾಂಧಿ ಮಾತ್ರ ತುಟಿ ಬಿಚ್ಚಿರಲಿಲ್ಲ. ಆದರೀಗ ತಮ್ಮ ಮದುವೆಯ ಬಗ್ಗೆ ರಾಹುಲ್​ ಗಾಂಧಿ ಮಾತನಾಡಿದ್ದಾರೆ.”ನನಗೆ ಈಗಾಗಲೇ ಮದುವೆಯಾಗಿದೆ. ನಿಮಗೆ ಯಾರು ಹೇಳಿದ್ದು ನನಗೆ ಮದುವೆಯಾಗಿಲ್ಲ ಎಂದು?,” ಈ ಮಾತನ್ನು ಹೇಳಿದ್ದು ರಾಹುಲ್​ ಗಾಂಧಿ. ಸಂಪಾದಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ರಾಹುಲ್​ ಈ ರೀತಿ ಉತ್ತರ ಕೊಟ್ಟ ತಕ್ಷಣ ಎಲ್ಲರೂ ಸ್ಥಬ್ದರಾದರು. ಇಷ್ಟು ದಿನಗಳ ಕಾಲ ಕಾಯುತ್ತಿದ್ದ ಉತ್ತರವನ್ನು ರಾಹುಲ್​ ಇಷ್ಟು ಅನಾಯಾಸವಾಗಿ ಹೇಳಿ ಬಿಡುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.

ತಮಗೆ ಮದುವೆಯಾಗಿದೆ ಎಂಬುದನ್ನು ಹೇಳಿದ ನಂತರ ರಾಹುಲ್​ ಗಾಂಧಿ, ನಂತರ ಇದೊಂದು ಹಾಸ್ಯ ಚಟಾಕಿ ಎಂಬ ರೀತಿ ಪ್ರತಿಕ್ರಿಯಿಸಿದರು. ನಾನು ಮದುವೆಯಾಗಿರುವುದು ನಿಜ ಆದರೆ ಅದು ಕಾಂಗ್ರೆಸ್​ ಪಕ್ಷದ ಜತೆ. ಕಾಂಗ್ರೆಸ್​ ಪಕ್ಷದ ಜತೆ ನನಗೆ ಮದುವೆಯಾಗಿ ಯಾವುದೋ ಕಾಲವಾಗಿದೆ, ಅದರ ಜತೆಗೇ ನಾನು ಬಾಳ್ವೆ ನಡೆಸುತ್ತಿದ್ದೇನೆ ಎಂಬ ರೀತಿ ರಾಹುಲ್​ ಮಾತನಾಡಿದರು.