ಕಾಪು : ಕಾಪುವಿಧಾನಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರ್ಮೆ ಸುರೇಶ್ ಶೆಟ್ಟಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಗುರ್ಮೆ ಅಭಿಮಾನಿಗಳು, ಬಿಜೆಪಿ ಮುಖಂಡರು,ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಯ ಮುಖಂಡರು ಕಳತ್ತೂರಿನ ನಿವಾಸದಲ್ಲಿ ಸೇರಿ ಗುರ್ಮೆಯ ಮುಂದಿನ ನಡೆ ಏನು ಎಂಬುದರ ಚರ್ಚೆ ನಡೆಸಿದರು.
ಇಡೀ ಕಾಪು ವಿಧಾನ ಸಭಾ ಕ್ಷೇತ್ರದ ಸಾವಿರಾರು ಗುರ್ಮೆ ಅಭಿಮಾನಿಗಳು ಹೈಕಾಮಂಡ್ ವಿರುದ್ದ ಘೋಷನೆ ಕೂಗುತ್ತಿದ್ದಂತೆ ಗುರ್ಮೆ ಮಧ್ಯ ಪ್ರವೇಶಿಸಿ ಯಾರು ಕೂಡ ನಮ್ಮ ಪಕ್ಷದ ಹಿರಿಯರ ವಿರುದ್ದ ಘೋಷನೆ ಹಾಕದಂತೆ ವಿನಂತಿಸಿಕೊಂಡರು. ಹಿರಿಯ ವ್ಯಕ್ತಿಗಳು.ಅಭಿಮಾನಿಗಳು ಸುರೇಶ್ ಶೆಟ್ಟಿ ಗುರ್ಮೆ ಟಿಕೆಟ್ ಕೈ ತಪ್ಪಿರುವುದಕ್ಕೆ ಬೇಸರದ ಮಾತುಗಳನ್ನ ವ್ಯಕ್ತ ಪಡಿಸಿ ಪಕ್ಷೇತರ ನಿಲ್ಲುವಂತೆ ಒತ್ತಾಯಿಸಿದರು.
ತದನಂತರ ಮಾತಾಡಿದ ಸುರೇಶ್ ಶೆಟ್ಟಿ”ನಾನು ರಾಜಕೀಯಕ್ಕೆ ಬಂದಿರುವುದು ಆಕಸ್ಮಿಕ ಸ್ನೇಹಿತರ ಒತ್ತಡಕ್ಕೆ ಮಣಿದು ಈ ರಂಗಕ್ಕೆ ಬರಬೇಕಾಯಿತು , ಖಾಲಿ ಕೈಯಲ್ಲಿ ಊರು ಬಿಟ್ಟು ಪರಊರಿನಲ್ಲಿ ಉದ್ಯಮ ನಡೆಸುತ್ತಿರಬಹುದು ಆದರ ಬಡವರ ಕಷ್ಟ ನನಗೆ ತಿಳಿದಿದೆ. ರಾಜಕೀಯದಿಂದ ದುಡ್ಡು ಮಾಡುವ ಅವಶ್ಯಕತೇ ಇಲ್ಲ ಅಥವಾ ಅಂತಹ ದಾರಿದ್ರ್ಯ ನನಗಿನ್ನು ಬಂದಿಲ್ಲ , ನಾನು ಸಂಪಾದಿಸಿದ ಹಣದಲ್ಲಿ ಅರ್ಧಕಿಂತಲೂ ಹೆಚ್ಚಿನ ಭಾಗ ಜಾತಿ ಮತ ಬೇಧವಿಲ್ಲದೆ ದಾನ ಧರ್ಮ ಮಾಡಿದ್ದೆನೆ ಮತ್ತು ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳನ್ನ ನಿಷ್ಠೆಯಿಂದ ಧರ್ಮ ಪ್ರಕಾರ ಮಾಡಿದ್ದೆನೆ ಆದರೇ ಇವತ್ತು ನನಗೆ ಟಿಕೆಟ್ ಮಿಸ್ ಆಗಿರಬಹುದು ಅಥವಾ ಶಾಸಕನಾಗದೇ ಇರಬಹುದು ಆದ್ರೇ ನನ್ನ ಜತೆ ನೀವೆಲ್ಲ ಇರುವಾಗ ಇದಕ್ಕಿಂತ ದೊಡ್ಡ ಶಾಸಕಗಿರಿ ಯಾವ ಲೆಕ್ಕ ಎಂದು ನುಡಿದರು.ಮತ್ತು ಈ ಟಿಕೆಟ್ ಕೈ ತಪ್ಪಿರುವುದು ಸಹ ದೇವರು ನನಗೆ ಒಳ್ಳೆಯದನ್ನೆ ಮಾಡಲು ಹೀಗೆ ಮಾಡಿರಬಹುದೆಂದು ಹೇಳಿ ಭಾವುಕರಾಧರು.ಹಾಗೂ ನಾನು ಯಾವುದೇ ಕಾರಣಕ್ಕೂ ಪಕ್ಷವನ್ನು ತ್ಯಜಿಸುವುದಿಲ್ಲ ಆದರೇ ಮುಂದಿನ ನಡೆ ಏನು ಎಂಬುದನ್ನು ಎರಡು ದಿನದೊಳಗೆ ಸಭೆ ಕರೆದು ತಿಳಿಸುತ್ತೆನೆ ಎಂದರು”.
ಸುರೇಶ್ ಶೆಟ್ಟಿ ಗುರ್ಮೆ ಅವರು ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ, ಪದಾ„ಕಾರಿಯಾಗಿ, ಜಿಲ್ಲಾ ಮುಖಂಡರಾಗಿ ಸಕ್ರಿಯರಾಗಿದ್ದು, ಕಾಪು ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆ, ಗ್ರಾ.ಪಂ., ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳಲ್ಲಿ ಪಕ್ಷದ ಪ್ರಧಾನ ಶಕ್ತಿಯಾಗಿ, ಚೈತನ್ಯ ತುಂಬಿದ್ದ ಅವರು ಕಾರ್ಯಕರ್ತರ ಪ್ರತೀ ಕಷ್ಟಗಳಲ್ಲಿಯೂ ನೇರವಾಗಿ ಭಾಗಿಯಾಗುತ್ತಿದ್ದರು. ಅವರಿಗೆ ಬಿಜೆಪಿ ಕೊನೇ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿರುವುದು ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು ರವಿವಾರ ಅವರ ಮನೆಗೆ ಭೇಟಿ ನೀಡಿದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.
2 comments
Undu daada anna same photo mooji mooji sarthi padhdin
thank u sir, tappun sari mlpuva envchene supportb malpule.
2 comments
Undu daada anna same photo mooji mooji sarthi padhdin
thank u sir, tappun sari mlpuva envchene supportb malpule.
Comments are closed.