ನವೆಂಬರ್ 7 ರಂದು ಕಾಪು -ಬೈಂದೂರಿಗೆ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳ‌ ಆಗಮನ : ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾಗೋಷ್ಠಿ – Vishwanews24

Featured, ಉಡುಪಿ

ನವೆಂಬರ್ 7 ರಂದು ಕಾಪು -ಬೈಂದೂರಿಗೆ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳ‌ ಆಗಮನ 

ಕಾಪು ಪೇಟೆಯಲ್ಲಿ ಇಪ್ಪತ್ತು ಸಾವಿರ ಮಂದಿಯ ಫಲಾನುಭವಿಗಳ ಸಮಾವೇಶ

ಉಡುಪಿ ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ರಚನೆಗೆ ಸಿ.ಎಂ ಗೆ ಮನವಿ

ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾಗೋಷ್ಠಿ

ಕಾಪು : ನವೆಂಬರ್ 7 ರಂದು ಜನ ಸ್ಪಂದನ ಕಾರ್ಯಕ್ರಮದ ಅಂಗವಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕರಾವಳಿ ಪ್ರವಾಸ ಕೈಗೊಂಡಿದ್ದು ಇದರ ಪ್ರಕಾರ ಕಾಪುವಿನಲ್ಲಿ 20000 ಸಾವಿರ ಮತ್ತು ಬೈಂದೂರಿನಲ್ಲಿ 25000 ಸಾವಿರ ಮಂದಿಯ ಫಲಾನುಭವಿಗಳ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.
ಬೈಂದೂರಿನಲ್ಲಿ 1280 ಕೋಟಿಯ ಶಂಕುಸ್ಥಾಪನೆಯ ಕಾರ್ಯಕ್ರಮ ಬೈಂದೂರಿನಲ್ಲಿ ಆಯೋಜಿದ್ದು ಮುಖ್ಯಮಂತ್ರಿ ಬೊಮ್ಮಾಯಿ ಸಹಿತ ರಾಜ್ಯದ ವಿವಿಧ ನಾಯಕರು ನೆರೆವೇರಿಸಲಿರುವರು ಎಂದರು.

ಸಿಎಂ ಬಸವರಾಜ್ ಬೊಮ್ಮಾಯಿ , ಮಾಜಿ ಸಿಎಂ ಬಿಎಸ್ ವೈ ಭೇಟಿ - ಕುತೂಹಲ ಮೂಡಿಸಿದ ಹಾಲಿ- ಮಾಜಿ  ನಡುವಿನ ಮಾತುಕತೆ - Kanlish News : Karnataka - Latest Kannada Breaking News  Today, Headlines, Movies ...

ಉಡುಪಿಗೆ ಆಗಮಿಸುವ ಮುಖ್ಯಮಂತ್ರಿಗಳ‌ ಬಳಿ ಉಡುಪಿ ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ರಚನೆ ಹಾಗೂ ಉಡುಪಿಗೆ ವಿಶ್ವವಿದ್ಯಾಲಯದ ಕುರಿತಾಗಿ ಮನವಿ ಸಲ್ಲಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಸ್ತರದ ಪದಾಧಿಕಾರಿಗಳಾದ ಕಡಿಯಾಳಿ‌ ರಾಘವೇಂದ್ರ ಕಿಣಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ವೀಣಾ ಶೆಟ್ಟಿ, ದಾವೂದ್ ಅಬೂಬ್ಬಕರ್,ಶ್ರಿನಿಧಿ ಹೆಗ್ಡೆ,ಗುರುಪ್ರಸಾದ್ ಶೆಟ್ಟಿ, ಸತ್ಯೇಂದ್ರ ನಾಯಕ್ ಉಪಸ್ಥಿತರಿದ್ದರು.

ಕಾಪುವಿಗೆ ಲಾಲಾಜಿ‌ ಮಾತ್ರವಲ್ಲ ನಾನು ಕೂಡ ಟಿಕೆಟ್ ಆಕಾಂಕ್ಷಿ : ಕುಯಿಲಾಡಿ ಸುರೇಶ್ ನಾಯಕ್ : vishwanews24

Leave a Reply