ಅಲ್ಹಾ ದೇವರಿಗೆ ಖುಷಿಯಾಗಬೇಕು, ಹೀಗಾಗಿ ನಾವು ಕಾಶ್ಮೀರ ಜನತೆಯ ಪರವಾಗಿದ್ದೇವೆ: ಇಮ್ರಾನ್ ಖಾನ್ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಇಸ್ಲಾಮಾಬಾದ್: ಕಾಶ್ಮೀರಿಗಳ ಪರವಾಗಿ ನಿಲ್ಲುವವರು ಜಿಹಾದ್ (ಪವಿತ್ರ ಯುದ್ಧ)ನಲ್ಲಿ ತೊಡಗಿರುವವರು. ಇಡೀ ವಿಶ್ವವೇ ಬೆಂಬಲ ನೀಡದಿದ್ದರೂ ಕೂಡ ಪಾಕಿಸ್ತಾನ ಮಾತ್ರ ಕಾಶ್ಮೀರಿಗಳ ಪರವಾಗಿ ನಿಲ್ಲುತ್ತದೆ ಎಂದು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ವಿಶ್ವಸಂಸ್ಥೆ ಪ್ರವಾಸದಿಂದ ಇಸ್ಲಾಮಾಬಾದಿಗೆ ಬಂದಿಳಿದ ಇಮ್ರಾನ್ ಖಾನ್ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಇಡೀ ವಿಶ್ವ ಕಾಶ್ಮೀರಿಗಳ ಪರವಾಗಿ ನಿಲ್ಲುತ್ತದೊ, ಬಿಡುತ್ತದೊ ಆದರೆ ನಾವು ಮಾತ್ರ ಅವರ ಪರವಾಗಿ ನಿಲ್ಲೋಣ ಎಂದರು.

ಕಾಶ್ಮೀರಿಗಳ ಪರವಾಗಿ ನಿಲ್ಲುವುದು ಜಿಹಾದ್ ಆಗಿದೆ. ಅಲ್ಹಾ ದೇವರಿಗೆ ಖುಷಿಯಾಗಬೇಕು ಹೀಗಾಗಿ ನಾವು ಕಾಶ್ಮೀರ ಜನತೆಯ ಪರವಾಗಿಯೇ ನಿಲ್ಲೋಣ ಎಂದರು. ಇದು ಹೋರಾಟವಾಗಿದ್ದು ಸಮಯ ಸರಿಯಿಲ್ಲದಿರುವ ಈ ಸಂದರ್ಭದಲ್ಲಿ ಆಶಾವಾದ ಕಳೆದುಕೊಳ್ಳಬೇಡಿ. ನಾವು ಅವರ ಜತೆಗಿದ್ದೇವೆ ಎಂದು ಕಾಶ್ಮೀರಿಗಳು ಬಯಸುತ್ತಿದ್ದಾರೆ, ಹೀಗಾಗಿ ನಾವು ನಿರಾಶೆಯಾಗುವುದು ಮತ್ತು ಅವರನ್ನು ನಿರಾಶೆಪಡಿಸುವುದು ಬೇಡ, ನಾವು ಕಾಶ್ಮೀರ ಜನತೆಯ ಪರವಾಗಿದ್ದರೆ ಅವರು ಈ ಹೋರಾಟದಲ್ಲಿ ಖಂಡಿತ ಗೆಲ್ಲುತ್ತಾರೆ ಎಂದರು.