ನುಸುಳುಕೋರರಿಗೆ ಕಾದಿದೆ ಲೇಸರ್ ಶಾಕ್,ಭಾರತ- ಪಾಕಿಸ್ತಾನ ಗಡಿ: ‘ಸ್ಮಾರ್ಟ್ ಬೇಲಿ’ ಇಂದು ಅನಾವರಣ, ಮೋದಿ ಕಾರ್ಯಕ್ಕೆ ಬೇ‍ಷ್ ಎಂದ ದೇಶ.

Featured, ರಾಜ್ಯ ನ್ಯೂಸ್

ನವದೆಹಲಿ: ಭಾರತ- ಪಾಕಿಸ್ತಾನ ಗಡಿಯಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ ‘ಸ್ಮಾರ್ಟ್‌ ಬೇಲಿ’ಯನ್ನು ಗೃಹಸಚಿವ ರಾಜನಾಥ್‌ ಸಿಂಗ್ ಅವರು ಸೋಮವಾರ ಅನಾವರಣಗೊಳಿಸಲಿದ್ದಾರೆ.

ತಲಾ 5 ಕಿ.ಮೀ ವ್ಯಾಪ್ತಿಯಲ್ಲಿನ ಈ ಬೇಲಿ ಲೇಸರ್ ಚಾಲಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಅರೆಸೇನಾ ಪಡೆಯು ಇದನ್ನು ಕಾರ್ಯಗತಗೊಳಿಸಿದೆ. ಜಮ್ಮುವಿನ ಮುಂಚೂಣಿ ‍ಪ್ರದೇಶದಲ್ಲಿ ರಾಜನಾಥ್‌ ಸಿಂಗ್ ಅವರು ಈ ಬೇಲಿಯನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಎಸ್‌ಎಫ್‌ನ ಹಿರಿಯ ಅಧಿಕಾರಿಗಳು ಬೇಲಿಗೆ ಚಾಲನೆ ನೀಡುವುದು ಮತ್ತು ಅದರ ಪ್ರತಿಕ್ರಿಯಾ ಕಾರ್ಯತಂತ್ರದ ಪ್ರಾತ್ಯಕ್ಷಿಕೆಯನ್ನು ಗೃಹಸಚಿವರಿಗೆ ತೋರಿಸಲಿದ್ದಾರೆ.ಕಣ್ಗಾವಲು, ಸಂವಹನ ಮತ್ತು ದತ್ತಾಂಶ ಸಂಗ್ರಹಕ್ಕಾಗಿ ಸ್ಮಾರ್ಟ್‌ ಬೇಲಿಯಲ್ಲಿ ಸಾಕಷ್ಟು ಉಪಕರಣಗಳನ್ನು ಅಳವಡಿಸಲಾಗಿದೆ.

ದಿನದ 24 ಗಂಟೆ ಕಣ್ಗಾವಲು ನಡೆಸುವ ಈ ಬೇಲಿಯನ್ನು ದೂಳಿನ ಮಾರುತ, ಮಂಜು ಅಥವಾ ಮಳೆ ಹೀಗೆ ಯಾವುದೇ ಹವಾಮಾನದಲ್ಲೂ ಕೆಲಸ ಮಾಡುವಂತೆ ನಿರ್ಮಿಸಲಾಗಿದೆ.