ಪಡುಬಿದ್ರಿ ಪೋಲಿಸ್ ಠಾಣೆಯ ಹತ್ತು ಸಿಬ್ಬಂದಿಗೆ ಕೊರೋನಾ ಪಾಸಿಟಿವ್- ಠಾಣೆಯಲ್ಲಿ ನಡೆದ ಬರ್ತ್ಡೆ ಔತನಕೂಟವೇ ಕೊರೋನಾ ಹರಡಲು ಕಾರಣವಾಯಿತೇ….??_vishwanews24
ಪಡುಬಿದ್ರಿ ಪೋಲಿಸ್ ಠಾಣೆಯ ಹತ್ತು ಸಿಬ್ಬಂದಿಗೆ ಕೊರೋನಾ ಪಾಸಿಟಿವ್- ಠಾಣೆಯಲ್ಲಿ ನಡೆದ ಬರ್ತ್ಡೆ ಔತನಕೂಟವೇ ಕೊರೋನಾ ಹರಡಲು ಕಾರಣವಾಯಿತೇ….??
ಕಾಪು : ಪಡುಬಿದ್ರಿ ಠಾಣೆಯ ಎಸ್ಸೈ ಸಹಿತ 10 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು,ಠಾಣೆಯನ್ನು ಪಕ್ಕದ ಬೋರ್ಡ್ ಶಾಲೆಗೆ ಸ್ಥಳಾಂತರಿಸಲಾಗಿದೆ.
ಪಡುಬಿದ್ರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ
ಎಸ್ಸೈ ದಿಲೀಪ್ ಸಹಿತ 10 ಪೊಲೀಸರಿಗೆ ಕೊರೊನಾ ಅಂಟಿಕೊಂಡಿದ್ದು,ಸದ್ಯ ಅವರೆಲ್ಲರೂ ಕ್ವಾರಂಟೈನ್ನಲ್ಲಿದ್ದಾರೆ.ಈ ಹಿನ್ನೆಲೆ ಪಡುಬಿದ್ರಿ ಪೊಲೀಸ್ ಠಾಣೆಯನ್ನು 24 ಗಂಟೆಗಳ ಕಾಲ ಸೀಲ್ಡೌನ್ ಮಾಡಿ ಠಾಣೆಯನ್ನು ಪಡುಬಿದ್ರಿ ಬೋರ್ಡ್ ಶಾಲೆಗೆ ಸ್ಥಳಾಂತರಿಸಲಾಗಿದೆ.
ಠಾಣೆಯಲ್ಲಿ ಕೆಲವು ದಿನಗಳ ಹಿಂದೆ ಠಾಣೆಯಲ್ಲಿ ಪೊಲೀಸರೊಬ್ಬರ ಹುಟ್ಟು ಹಬ್ಬದ ಪ್ರಯುಕ್ತ ಔತಣ ಕೂಟ ಏರ್ಪಡಿಸಲಾಗಿತ್ತು.ಆ ಸಮಾರಂಭ ನಡೆದ ವಾರದೊಳಗೆ ಸಿಬ್ಬಂದಿಯೊಬ್ಬರಿಗೆ ಜ್ವರ ಬಂದ ಹಿನ್ನೆಲೆ ಕೊವಿಡ್ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಬಂದಿತ್ತು.ಬಳಿಕ ಠಾಣೆಯ ಎಲ್ಲರಿಗೂ ಕೊವಿಡ್ ಪರೀಕ್ಷೆ ನಡೆಸಲಾಗಿದ್ದು,ಈ ಸಂದರ್ಭ ಎಸ್ಸೈ ಸಹಿತ 10 ಪೊಲೀಸರಿಗೆ ಕೊರೊನಾ ದೃಡಪಟ್ಟಿರುವುದಾಗಿ ತಿಳಿದು ಬಂದಿದೆ.
ಹುಟ್ಟುಹಬ್ಬ ಆಚರಣೆ ಮಾಡಿದ್ದ ದಿನ ಭಾರಿ ಭೊಜನ, ಡಾನ್ಸ್, ಸಂಗೀತ ಕಾರ್ಯಕ್ರಮ ಮಾಡಿದ್ದು ಹುಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಬ್ಬಂದಿಯೋರ್ವರಿಗೆ ಕೊರೋನಾ ಸೋಂಕಿದ್ದು ಇದರಿಂದಾಗಿಯೇ ಈಗ ಒಬ್ಬಬ್ಬರಿಗೆ ಕೊರೋನಾ ಸೊಂಕು ತಗುಲುತ್ತಿದ್ದು,ಇದು ಪಡುಬಿದ್ರಿ ಪೊಲೀಸ್ ಠಾಣಾ ಎಸೈ ದಿಲೀಪ್ ರವರ ತೀವ್ರ ನಿರ್ಲಕ್ಷತನ ಇದಕ್ಕೆ ಕಾರಣವಾಗಿರುವುದಾಗಿದೆ.ಈ ಬಗ್ಗೆ ಉನ್ನತ ಅಧಿಕಾರಿಗಳು ಕ್ರಮಕೈಗೊಳ್ಳುವರೇ ಎಂದು ಕಾದುನೋಡಬೇಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.
