ಪಡುಬಿದ್ರಿ ಬಂಟರ ಸಂಘದ ವತಿಯಿಂದ ಅಗತ್ಯ ದಿನಬಳಗೆ ಆಹಾರ ಸಾಮಾಗ್ರಿ ವಿತರಣೆ.

Featured, ಉಡುಪಿ

ಪಡುಬಿದ್ರಿ ಬಂಟರ ಸಂಘದ ವತಿಯಿಂದ ಅಗತ್ಯ ದಿನಬಳಗೆ ಆಹಾರ ಸಾಮಾಗ್ರಿ ವಿತರಣೆ.

ಕಾಪು: ಪಡುಬಿದ್ರಿ ಬಂಟರ ಸಂಘದ ವತಿಯಿಂದ ಎಮ್.ಆರ್.ಜಿ‌ ಗ್ರೂಪ್‌ನ ಆಡಳಿತ ನಿರ್ದೇಶಕರಾದ ಕೆ.ಪ್ರಕಾಶ್ ಶೆಟ್ಟಿಯವರು ನೀಡಿದ ಆಹಾರ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಪಡುಬಿದ್ರಿ ಬಂಟರ ಸಂಘದಲ್ಲಿ ನಡೆಯಿತು.

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಆಹಾರ ಸಾಮಾಗ್ರಿಗಳನ್ನು‌ ಹಸ್ತಾಂತರಿಸಿದರು.

ತದನಂತರ ಮಾತನಾಡಿದ ಅವರು” ಬಡವರಿಗೆ ಸಹಕಾರ ಮಾಡಲು ಬಂಜಾರ ಪ್ರಕಾಶ್ ಶೆಟ್ಟಿ ಈ ಯೋಜನೆಗೆ ಸಹಕರಿಸಿ ನಮ್ಮ ಜತೆ ಕೈಜೋಡಿಸಿ ಬಡ ಜನರ ಕೂಲಿಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಇದೊಂದು ಶ್ಲಾಘನೀಯ ಕಾರ್ಯ ಎಂದರು.

ಈ ಸಂಧರ್ಭದಲ್ಲಿ ಪಡುಬಿದ್ರಿ ಬಂಟರ ಸಂಘದ ಮುಖಂಡರು ಉಪಸ್ಥಿತರಿದ್ದರು.