ಕಾಪು ನ್ಯೂ ಆಟೋ ರಿಕ್ಷಾ ಚಾಲಕ‌ಮಾಲಕರಿಂದ ದಿನಸಾಮಾಗ್ರಿಗಳ ವಿತರಣೆ

Featured, ಉಡುಪಿ

ಕಾಪು: ನ್ಯೂ ಆಟೋ ರಿಕ್ಷಾ ಚಾಲಕ‌ ಮಾಲಕ‌ ಸಂಘ ಕಾಪು ಇವರ ವತಿಯಿಂದ ಸುಮಾರು 150 ಕುಟುಂಬದ ರಿಕ್ಷಾ ಚಾಲಕರಿಗೆ ದಿನಬಳಕೆ ಸೊತ್ತುಗಳನ್ನು ಉದ್ಯಮಿ‌ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕಾಪು ಲೀಲಾಧರ್ ಶೆಟ್ಟಿ ವಿತರಿಸಿದರು.

ಪೋಲಿಸ್ ಸಹಾಯಕ ಉಪ ನೀರಿಕ್ಷಕರಾದ ರಾಜೇಂದ್ರ ಮಣಿಯಾನಿ ಮಾತಾಡಿ” ಕಾನೂನು ಮೀರಿ ಬಾಡಿಗೆ ಮಾಡಲು ಅವಕಾಶ ಇಲ್ಲ ಲಾಕ್ ಡೌನ್ ಮುಗಿಯುವ ರಿಕ್ಷಾ ಚಾಲಕರು ಸಹಕರಿಬೇಕು ಮತ್ತು ಇಂತಹ ತುರ್ತು ಸಂಧರ್ಭದಲ್ಲಿ ನಮ್ಮ ನಮ್ಮ‌ಸಂಘ ಸಂಸ್ಥೆಗಳು ಸಹಕಾರ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ಅನಿಲ್ ಶೆಟ್ಟಿ, ಉಪಾಧ್ಯಕ್ಷ ಗಿಳಿ ಉಮ್ಮಾರ್,ಕಾರ್ಯದರ್ಶಿ ದಿನಕ್ ಕಲ್ಯಾ ಜೊತೆ ಕಾರ್ಯದರ್ಶಿ ಶಶಿಧರ್ ಕೋಶಾಧಿಕಾರಿ ರಜಾಕ್ ಮೊದಲಾದವರು ಉಪಸ್ಥಿತರಿದ್ದರು.