ಪಡುಬಿದ್ರಿ ಸಿಎ ಬ್ಯಾಂಕ್ ವತಿಯಿಂದ ಕಾಪು ಫ್ರಂಟ್ಲೈನ್ ಫ್ರಂಟ್ಲೈನ್ ವಾರಿಯರ್ಸ್ ಗೆ ಆಕ್ಸೋಮೀಟರ್ -ಫೇಸ್ ಶೀಲ್ಡ್ ಕೊಡುಗೆ.-vishwanews24
ಪಡುಬಿದ್ರಿ ಸಿಎ ಬ್ಯಾಂಕ್ ವತಿಯಿಂದ ಕಾಪು ಫ್ರಂಟ್ಲೈನ್ ಫ್ರಂಟ್ಲೈನ್ ವಾರಿಯರ್ಸ್್ ಗೆ ಆಕ್ಸೋಮೀಟರ್ -ಫೇಸ್ ಶೀಲ್ಡ್ ಕೊಡುಗೆ.
ಕಾಪು: ಪಡುಬಿದ್ರಿ ಸಿ ಎ ಬ್ಯಾಂಕ್ ವತಿಯಿಂದ ಕಾಪು ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತ ಹಾಗೂ ಮಾಧ್ಯಮದವರಿಗೆ ,ಪಡುಬಿದ್ರಿ ಪೋಲಿಸ್ ಠಾಣೆ,ಬ್ಯಾಂಕ್ ವ್ಯಾಪ್ತಿಯ ನಾಲ್ಕು ಪಂಚಾಯತ್, ಆಕ್ಸೋಮೀಟರ್ -ಫೇಸ್ ಶೀಲ್ಡ್ ಕೊಡುಗೆ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮಾತಾಡಿ” ಕೊರೋನಾ ಫ್ರಂಟ್ಲೈನ್ ವಾರಿಯರ್ಸ್ ಆಗಿ ಸೇವೆ ಮಾಡುತ್ತಿರುವ ಈ ಎಲ್ಲಾ ಸಿಬ್ಬಂದಿಗಳಿಗೆ ಕೊಡಮಾಡಿರುವ ಬ್ಯಾಂಕಿನ ಈ ಕೊಡುಗೆ ಅತ್ಯಂತ ಶ್ಲಾಘನೀಯವಾಗಿದೆ ಎಂದರು ಮತ್ತು ಸಹಕಾರಿ ಸಂಸ್ಥೆಗಳು ಕೇವಲ ಲಾಭ ನಡೆಸುವ ಉದ್ದೇಶವಲ್ಲದೆ ಸಮಾಜದ ಸಂಕಷ್ಟದಲ್ಲಿ ಜತೆ ನಿಂತು ಸೇವೆ ಮಾಡುವ ಮೂಲಕ ತನ್ನದೆ ಆದ ಕೊಡುಗೆ ನೀಡುತ್ತಾ ಬಂದಿದೆ ಎಂದರು , ಮುಂದಿನ ದಿನದಲ್ಲಿಯೂ ಸಮಾಜದ ಜತೆ ಸಹಕಾರಿ ಸಂಸ್ಥೆಗಳು ಇದೆ ಎಂದು.
ಇದೇ ಸಂಧರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ದುಡಿಯುವ ನೌಕರರನ್ನು ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಪರಿಗಣಿಸಬೇಕು ಎಂದು ಅವರು ಸರ್ಕಾರಕ್ಕೆ ವಿನಂತಿಸಿದರು.
ಪಡುಬಿದ್ರಿ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ,ಪಡುಬಿದ್ರಿ ಸಿ.ಎ ಬ್ಯಾಂಕ್ ಅಧ್ಯಕ್ಷ ಸುಧಿರ್ ಕುಮಾರ್ ವೈ, ಹಾಗೂ ಬ್ಯಾಂಕಿನನಿರ್ದೇಶಕರು ,ಉಪಸ್ಥಿತರಿದ್ದರು.
ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು-Vishwanews24


