ಬಂಟ್ವಾಳ : ಇನ್‌ಸ್ಟಾಗ್ರಾಂನಲ್ಲಿ ಪರಿಚಯ – ಬಾಲಕನಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ , ಪೋಕ್ಸೋ ಪ್ರಕರಣ ದಾಖಲು – Vishwanews24

Featured, ದಕ್ಷಿಣ ಕನ್ನಡ

ಇನ್‌ಸ್ಟಾಗ್ರಾಂನಲ್ಲಿ ಪರಿಚಯ : ಬಾಲಕನಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ , ಪೋಕ್ಸೋ ಪ್ರಕರಣ ದಾಖಲು

ಬಂಟ್ವಾಳ: ಇನ್‌ ಸ್ಟಾಗ್ರಾಮ್‌ ಮೂಲಕ ಪರಿಚಯವಾದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೊಬ್ಬ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಎಸೆಸೆಲ್ಸಿ ವ್ಯಾಸಂಗ ಮಾಡುತ್ತಿರುವ ಬಾಲಕಿಗೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಇನ್‌ಸ್ಟಾ ಗ್ರಾಮ್‌ ಮೂಲಕ ಪರಿಚಯವಾಗಿದ್ದ. ಬಳಿಕ ಆಗಾಗ್ಗೆ ಆತ ಬಾಲಕಿ ಮನೆಗೆ ಬರುತ್ತಿದ್ದ. ಡಿಸೆಂಬರ್ 2ರಂದು ರಾತ್ರಿ 8.30ರ ಸುಮಾರಿಗೆ ಆತ ಬಾಲಕಿ ಮನೆಗೆ ಬಂದು ಆಕೆಯನ್ನು ಸ್ಕೂಟರ್‌ನಲ್ಲಿ ಕರೆದೊಯ್ದು ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ.

ಸುಳ್ಯ:  ಕಾಂತಾರ ಸಿನಿಮಾಕ್ಕೆ ವೀಕ್ಷಿಸಲು ಬಂದಿದ್ದ ಮುಸ್ಲಿಂ ಜೋಡಿಗೆ ತಂಡದಿಂದ ಹಲ್ಲೆ: ಐವರ ವಿರುದ್ದ ಪ್ರಕರಣ ದಾಖಲು – Vishwanews24

ಇದರಿಂದ ಆತಂಕಗೊಂಡ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಬಾಲಕನನ್ನು ರಿಮಾಂಡ್‌ ಹೋಮ್‌ಗೆ ದಾಖಲಿಸಲಾಗಿದೆ.

Leave a Reply