ಬಿಲ್ಲವರಿಗೆ ನಿಗಮ ಮಾಡಿ ಅನುದಾನ ನೀಡದೆ ಮೂಗಿಗೆ ತುಪ್ಪ ಸವರಿದ ರಾಜ್ಯ ಸರಕಾರ : ಯೋಗೀಶ್ ವಿ. ಶೆಟ್ಟಿ – Vishwanews24
ಬಿಲ್ಲವರಿಗೆ ನಿಗಮ ಮಾಡಿ ಅನುದಾನ ನೀಡದೆ ಮೂಗಿಗೆ ತುಪ್ಪ ಸವರಿದ ರಾಜ್ಯ ಸರಕಾರ : ಯೋಗೀಶ್ ವಿ. ಶೆಟ್ಟಿ
ಬಿಲ್ಲವರಿಗೆ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಮಾಡಿರುವುದು ಸ್ವಾಗತಾರ್ಹ ಆದರೆ ಅನುದಾನವೇ ಕೊಡದೆ ನಿಗಮ ಮಾಡಿರುವುದು ಮೂಗಿಗೆ ತುಪ್ಪ ಸವರಿದಂತಿದೆ, ಬಂಟ ಸಮಾಜದಲ್ಲಿಯೂ ಆರ್ಥಿಕವಾಗಿ ಹಿಂದುಳಿದಿರುವ ಅನೇಕರಿದ್ದಾರೆ ಬಂಟ ಸಮಾಜಕ್ಕೂ ನಿಗಮ ಬೇಕೆನ್ನುವುದು ಬಂಟ ಸಮುದಾಯದ ನಾಯಕರ ಒಕ್ಕೊರಲ ಬೇಡಿಕೆಯಾಗಿದೆ, ಬಿಲ್ಲವ ಸಮಾಜದ ನಿಗಮಕ್ಕೆ ಅನುದಾನ, ಬಂಟ ಸಮಾಜಕ್ಕೆ ನಿಗಮ ಘೋಷಣೆ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ನಾಯಕರಾದ ಎಚ್. ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರಲಿದ್ದಾರೆ ಆಗ ಅವರೊಂದಿಗೆ ಚರ್ಚಿಸಿ ಬಿಲ್ಲವ ಸಮುದಾಯಕ್ಕೆ ಅನುದಾನ ಹಾಗೂ ಬಂಟ ಸಮುದಾಯದ ನಿಗಮ ಘೋಷಣೆ ಮಾಡುವಂತೆ ಚರ್ಚಿಸಲಿದ್ದೆವೆ.
ವಿಶ್ವಕರ್ಮ ನಿಗಮ , ಬ್ರಾಹ್ಮಣ ನಿಗಮವನ್ನೂ ಕುಮಾರಸ್ವಾಮಿಯವರೇ ಮಾಡಿದ್ದು ಕರಾವಳಿಯ ಇನ್ನುಳಿದ ಎಲ್ಲಾ ಸಮುದಾಯದ ಬೇಡಿಕೆಗಳನ್ನು ಕುಮಾರಸ್ವಾಮಿಯವರ ಮುಂದಿಟ್ಟು ಏನೆಲ್ಲಾ ಮಾಡಬೇಕೆಂದು ಚರ್ಚಿಸಿ ಕಾರ್ಯರೂಪಕ್ಕೆ ತರಲಿದ್ದೇವೆ.. ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
