ಬೈಂದೂರು: ಕಾರಿನ ಜೊತೆಗೆ ವ್ಯಕ್ತಿಯೊಬ್ಬ ಸುಟ್ಟು ಶವವಾಗಿ ಪತ್ತೆ – Vishwanews24

Featured, ಉಡುಪಿ

ಬೈಂದೂರು: ಕಾರಿನ ಜೊತೆಗೆ ವ್ಯಕ್ತಿಯೊಬ್ಬ ಸುಟ್ಟು ಶವವಾಗಿ ಪತ್ತೆ 

ಬೈಂದೂರು: ಅನಾಮದೇಯ ಕಾರಿನ ಜೊತೆಗೆ ವ್ಯಕ್ತಿಯೊಬ್ಬ ಸುಟ್ಟು ಶವವಾಗಿ ಪತ್ತೆಯಾಗಿರುವ ಘಟನೆ ಬೈಂದೂರು ಸಮೀಪದ ಹೇನ್ ಬೇರು ನಿರ್ಜನ ಪ್ರದೇಶದಲ್ಲಿ ಜು.12ರ ತಡರಾತ್ರಿ ವರದಿಯಾಗಿದೆ.

ಕಾರಿನಲ್ಲಿದ್ದ ವ್ಯಕ್ತಿ ಸಮೇತ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.‌ ಕಾರಿನ ಹಿಂಬದಿ‌ ಸೀಟ್ ನಲ್ಲಿ ವ್ಯಕ್ತಿ ಇದ್ದು, ವ್ಯಕ್ತಿಯ ಶವ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಕಂಡು ಹಿಡಿಯಲಾಗದಷ್ಟು ಸುಟ್ಟುಕರಕಲಾಗಿದೆ. ಕಾರಿನ ಚಾಲಕನ ಎಡಬದಿಯ ಸೀಟ್ ಹಿಂಬಾಗಕ್ಕೆ ವಾಲಿಕೊಂಡಂತಿದೆ.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯೋ ಆತ್ಮಹತ್ಯೆಯೋ ತನಿಖೆಯ ಬಳಿಕವಷ್ಟೇ ಸತ್ಯ ಹೊರ ಬರಬೇಕಿದೆ. ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆಯ ಜೊತೆಗೆ ಪ್ರಕರಣ ಭೇದಿಸಲು ಪೊಲೀಸರು ಮುಂದಾಗಿದ್ದಾರೆ.

ಮೂಲ್ಕಿ: ಸಂಬಂಧಿಕರಿಗೆ ವಾಟ್ಸಾಪ್ ಲೊಕೇಶನ್ ಕಳುಹಿಸಿ ಪಾವಂಜೆ ಸೇತುವೆಯಿಂದ ಹಾರಿದ ಪೋಸ್ಟ್ ಆಫೀಸ್ ಉದ್ಯೋಗಿ – Vishwanews24

Leave a Reply