ಬೈಂದೂರು: ಸರಣಿ ಅಪಘಾತ ; ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು – ಪೊಲೀಸ್ ವಾಹನ ಸಹಿತ ನಾಲ್ಕು ಬೈಕ್ ಗಳು ಜಖಂ – vishwanews24
ಬೈಂದೂರು: ಸರಣಿ ಅಪಘಾತ ; ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು – ಪೊಲೀಸ್ ವಾಹನ ಸಹಿತ ನಾಲ್ಕು ಬೈಕ್ ಗಳು ಜಖಂ
ಬೈಂದೂರು: ಅಪಘಾತಕ್ಕೀಡಾಗಿದ್ದ ವಾಹನವೊಂದರ ತೆರವು ಕಾರ್ಯಾಚರಣೆ ವೇಳೆಯ ಹೆದ್ದಾರಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟ ದಾರುಣ ಘಟನೆ ಬೈಂದೂರು ತಾಲೂಕಿನ ಶಿರೂರು ಸಮೀಪ ಗುರುವಾರ ನಡೆದಿದೆ.
ಮೃತರನ್ನು ಶಿರೂರಿನ ನಾಗೇಂದ್ರ ಮಹಾಲೆ (45) ಎಂದು ಗುರುತಿಸಲಾಗಿದೆ.
ಅಪಘಾತಕ್ಕೀಡಾಗಿದ್ದ ವಾಹನವೊಂದನ್ನು ಮೇಲೆತ್ತುವ ಕಾರ್ಯಾಚರಣೆ ವೇಳೆ ಈ ಸರಣಿ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಪೊಲೀಸರ ಗಸ್ತು (ಹೈವೆ ಪಟ್ರೋಲ್) ವಾಹನಕ್ಕೆ ಢಿಕ್ಕಿ ಹೊಡೆದಿದೆ. ಇದರ ಜೊತೆಗೆ ನಾಲ್ಕು ಬೈಕ್ ಗಳಿಗೂ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ನಾಗೇಂದ್ರ ಎಂಬವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ :
ಮುಲ್ಕಿ: ಯುವಕ ಮೃತ್ಯು ಪ್ರಕರಣ; ಕೊಲೆ ಶಂಕಿಸಿ ತಂದೆಯಿಂದ ದೂರು ದಾಖಲು – vishwanews24
ಹೆದ್ದಾರಿಯಲ್ಲಿ ಸರಕು ತುಂಬಿದ ಲಾರಿಯೊಂದು ಅಪಘಾತಕ್ಕೀಡಾಗಿತ್ತು. ಹೆದ್ದಾರಿ ನಿರ್ವಹಣೆಯವರು ಈ ಲಾರಿಯನ್ನು ಮೇಲೆತ್ತುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ರಸ್ತೆ ತಡೆ ಮಾಡಲಾಗಿತ್ತು. ವಾಹನ ಸಂಚಾರ ತಡೆಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇಳಿಜಾರು ರಸ್ತೆಯಾದ ಕಾರಣ ಅತಿವೇಗದಿಂದ ನುಗ್ಗಿದ ಲಾರಿ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ. ಈ ಲಾರಿ ಕೇರಳದಿಂದ ರಬ್ಬರ್ ಮಹಾರಾಷ್ಟ್ರದ ಕಡೆ ರಬ್ಬರ್ ಸಾಗಿಸುತ್ತಿತ್ತು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ವೃತ್ತನಿರೀಕ್ಷಕ ಸಂತೋಷ ಕಾಯ್ಕಿಣಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ :
ಸೆ.26ರಿಂದ ಮೂಡುಬಿದಿರೆಯಲ್ಲಿ ಕಂಬಳ ಅಕಾಡೆಮಿಯಿಂದ ಓಟಗಾರರಿಗೆ ತರಬೇತಿ ಶಿಬಿರ ಆರಂಭ – vishwanews24
ಈ ಬಗ್ಗೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
