ಭಾರತೀಯ ನಾಗರಿಕರಿಗೆ ಸೆ. 21ರವರೆಗೆ ಕೆನಡಾ ಪ್ರಯಾಣ ರದ್ದು -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಭಾರತೀಯ ನಾಗರಿಕರಿಗೆ ಸೆ. 21ರವರೆಗೆ ಕೆನಡಾ ಪ್ರಯಾಣ ರದ್ದು -Vishwanews24

ಟೊರೆಂಟೋ : ಕೋವಿಡ್ ಸೋಂಕು ಹರಡುವ ಆತಂಕದಿಂದ ಭಾರತೀಯ ನಾಗರಿಕ ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಿ ಕೆನಡಾ ಸರ್ಕಾರ ಹೊರಡಿಸಿರುವ ಆದೇಶವನ್ನು ಸೆಪ್ಟಂಬರ್ 21ರವರೆಗೆ ಮುಂದುವರೆಸಿದೆ. ಕೋವಿಡ್‍ನ ಎರಡನೇ ಅಲೆ ಹೆಚ್ಚಾಗಿದ್ದ ಕಳೆದ ಏಪ್ರಿಲ್‍ನಲ್ಲಿ ಕೆನಡಾದ ಒಕ್ಕೂಟ ಸಾರಿಗೆ ಸಚಿವಾಲಯ ಕಳೆದ ಭಾರತದಿಂದ ನೇರವಾಗಿ ಆಗಮಿಸುವ ವಿಮಾನಗಳ ಸೇವೆಯನ್ನು ತಡೆ ಹಿಡಿದಿತ್ತು. ಅದನ್ನು ಮತ್ತೆ ಮುಂದುವರೆಸಲಾಗಿದ್ದು ಸೆಪ್ಟಂಬರ್ 21ರವರೆಗೆ ನೇರ ವಿಮಾನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಕೆನೆಡಿಯನ್ನರ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆ ನಮ್ಮ ಮೊದಲ ಆಧ್ಯತೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದ ಅಂಕಿ ಅಂಶಗಳನ್ನು ಪರಿಶೀಲಿಸಿದ ಬಳಿಕ ಸದ್ಯಕ್ಕೆ ವಿಮಾನಗಳ ಪ್ರಯಾಣಕ್ಕೆ ಅವಕಾಶ ನೀಡುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸಾರಿಗೆ ಸಚಿವ ಒಮರ್ ಅಲ್‍ಗೋಬ್ರಾ ತಿಳಿಸಿದ್ದಾರೆ.

ಭಾರತದಿಂದ ನೇರವಾಗಿ ಕೆನಡಾಗೆ ಪ್ರಯಾಣ ಮಾಡಲು ಅವಕಾಶ ಇಲ್ಲವಾದರೂ, ಬೇರೆ ದೇಶಗಳ ಮೂಲಕ ಭಾರತೀಯರು ಕೆನಡಾಗೆ ಭೇಟಿ ನೀಡಬಹುದು. ಆದರೆ ಅದಕ್ಕೂ ಮೊದಲು ಭಾರತ ಹೊರತು ಪಡಿಸಿ ಬೇರೆ ದೇಶದಲ್ಲಿ ಕೋವಿಡ್ ಪತ್ತೆಗೆ ಮೋಲ್ಯಾಕ್ಯೂಲರ್ ಪರೀಕ್ಷೆ ಮಾಡಿಸಿ, ನೆಗೆಟಿವ್ ಫಲಿತಾಂಶ ಬಂದಿರಬೇಕು. ಅಂತಹ ವ್ಯಕ್ತಿಗಳು ಪ್ರಯಾಣ ಮಾಡಬಹುದು.

ಈ ಮೊದಲು ಕೋವಿಡ್ ಸೋಂಕಿಗೆ ಸಿಲುಕಿದ್ದವರು ತಮ್ಮ ಪ್ರಯಾಣಕ್ಕೆ ಮೊದಲು 14ರಿಂದ 90 ದಿನಗಳ ನಡುವೆ ಬೇರೆ ದೇಶದಲ್ಲಿ ಪರೀಕ್ಷೆ ಮಾಡಿಸಿರಬೇಕು. ಅದಕ್ಕೂ ಮೊದಲು ಅನ್ಯ ದೇಶದಲ್ಲಿ 14 ದಿನ ನೆಲೆಸಿರಬೇಕು ಎಂಬ ಕಠಿಣ ನಿಯಮಾವಳಿಗಳನ್ನು ವಿಧಿಸಲಾಗಿದೆ. ಭಾರತದಲ್ಲಿ ಕೋವಿಡ್‍ನಲ್ಲಿ ಡೆಲ್ಟಾ, ಡೆಲ್ಟಾ ಪ್ಲಸ್ ಸೇರಿದಂತೆ ನಾನಾ ರೀತಿಯ ರೂಪಾಂತರ ಸೋಂಕುಗಳ ಹರಡುತ್ತಿದ್ದು, ಬಹಳಷ್ಟು ದೇಶಗಳು ಇತರ ಬಗ್ಗೆ ಕಾಳಜಿ ವಹಿಸಿವೆ.