ಮಂಗಳೂರಿನ ಅಪ್ಪಟ ‘ಅಪ್ಪು’ ಅಭಿಮಾನಿ ಕೈಚಳಕದಲ್ಲಿ ಲೈಫ್ ಬಾಯ್ ಸೋಪ್​​ನಲ್ಲಿ ಮೂಡಿದ ‘ಅಪ್ಪು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರಿನ  ‘ಅಪ್ಪು’ ಅಭಿಮಾನಿ ಕೈಚಳಕದಲ್ಲಿ ಲೈಫ್ ಬಾಯ್ ಸೋಪ್​​ನಲ್ಲಿ ಮೂಡಿದ ‘ಅಪ್ಪು – Vishwanews24

ಮಂಗಳೂರು : ಮಂಗಳೂರಿನ ಅಪ್ಪಟ ‘ಅಪ್ಪು’ ಅಭಿಮಾನಿಯೊಬ್ಬರು ‘ಲೈಫ್ ಬಾಯ್’ ಬಾತ್ ಸೋಪ್‍ನಲ್ಲಿ ಪುನೀತ್ ರಾಜಕುಮಾರ್ ಚಿತ್ರ ಬಿಡಿಸಿ ವಿಶಿಷ್ಟ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಕೇವಲ ಎರಡು ಗಂಟೆಯಲ್ಲಿ ಸೋಪ್‍ನಲ್ಲಿ ಅಪ್ಪು ಚಿತ್ರವನ್ನು ಗುಂಡು ಪಿನ್ ಮೂಲಕ ಚಿತ್ರಿಸಿದ್ದಾರೆ.

ಬೇರೆ ಸೋಪ್​ಗಳಲ್ಲಿ ಅಪ್ಪು ಚಿತ್ರ ರಚಿಸಲು‌ ಕಲಾವಿದ ದೇವಿಕಿರಣ್ ಯತ್ನಿಸಿದರೂ, ಅದು ಸಾಧ್ಯವಾಗಿರಲಿಲ್ಲ. ಆ ಬಳಿಕ ಅವರು ಲೈಫ್ ಬಾಯ್ ಸೋಪ್​ನಲ್ಲಿ ಚಿತ್ರ ರಚನೆಗೆ ತೊಡಗಿದ್ದಾರೆ. ಮೊದಲನೇ ಬಾರಿ ಸರಿಯಾಗಿ ಬಂದಿರಲಿಲ್ಲ. ಎರಡನೇ ಬಾರಿ ಚೆನ್ನಾಗಿ ಬಂದಿದ್ದು, ಆ ಚಿತ್ರ ರಚನೆಯ ವಿಡಿಯೋವನ್ನು ದೇವಿಕಿರಣ್ ಅವರು ಫೇಸ್​ಬುಕ್​ನಲ್ಲಿ ಮಂಗಳವಾರ ಅಪ್ಲೋಡ್ ಮಾಡಿದ್ದರು. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಕರ್ನಾಟಕ ಬಂದ್ : ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದಿಂದ ಭಾಗಶಃ ಬಂದ್‌‌ಗೆ ಬೆಂಬಲ – VIshwanews24

Leave a Reply