ಮಂಗಳೂರಿನ ಕಲಾವಿದ ರಚಿಸಿರುವ ಚೌಕಿದಾರ್‌ ಶೇರ್‌ ಹೈ’ ಪೋಸ್ಟರ್‌ ಈಗ ಭಾರೀ ವೈರಲ್ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಮಂಗಳೂರಿನ ಕಲಾವಿದ ಜೀವನ್‌ ಆಚಾರ್ಯ ರಚಿಸಿರುವ ‘ಚೌಕಿದಾರ್‌ ಶೇರ್‌ ಹೈ’ ಪೋಸ್ಟರ್‌ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳ ಪ್ರೊಫೈಲ್‌ ಸೇರುತ್ತಿದೆ. 23 ವರ್ಷದ ಡಿಜಿಟಲ್‌ ಕಲಾವಿದ ಜೀವನ್‌ ಆಚಾರ್ಯ ಅರ್ಧ ಪಿಎಂ ಮೋದಿ ಮುಖ ಮತ್ತು ಇನ್ನರ್ಧ ಸಿಂಹದ ಮುಖವನ್ನು ಜತೆಯಾಗಿಸಿಕೊಂಡು ಪೋಸ್ಟರ್‌ ರಚಿಸಿದ್ದಾರೆ.

ಒಬ್ಬ ವ್ಯಕ್ತಿಯ ಮೇಲೆ ಕಲಾತ್ಮಕ ಚಿತ್ರ ರಚಿಸಬೇಕು ಎಂದರೆ ಆ ವ್ಯಕ್ತಿಯು ತಮ್ಮ ಮೇಲೆ ಪ್ರಭಾವ ಬೀರಿರಬೇಕು. ನಾನೊಬ್ಬ ಕಲಾಪ್ರೇಮಿ. ಒಬ್ಬ ವ್ಯಕ್ತಿಯ ಮೇಲೆ ಪೋಸ್ಟರ್‌ ರಚಿಸುವ ಮುನ್ನ ಎರಡು ಬಾರಿ ಯೋಚಿಸುತ್ತೇನೆ ಎಂದು ಜೀವನ್‌ ಆಚಾರ್ಯ ತಿಳಿಸಿದ್ದಾರೆ.

ಜೀವನ್‌ ಆಚಾರ್ಯ ರಚಿಸಿರುವ ‘ಚೌಕಿದಾರ್‌ ಶೇರ್‌ ಹೈ’ ಚಿತ್ರವನ್ನು ಮಾರ್ಚ್‌ 22ರಂದು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್‌ ಮಾಡಿದ್ದರು.

ಮಹಾಲಾಸ ಸ್ಕೂಲ್‌ ಆಫ್‌ ಆರ್ಟ್‌ನಲ್ಲಿ ಡಿಗ್ರಿ ಪದವಿ ಗಳಿಸಿರುವ ಜೀವನ್‌, ಸೈಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆ್ಯನಿಮೇಷನ್‌ ಹೇಳಿಕೊಡುತ್ತಿದ್ದಾರೆ. ಈ ಹಿಂದೆ ಕೆಸರಿ ಆವೃತ ಹನುಮಂತನ ಖ್ಯಾತ ಚಿತ್ರ ರಚಿಸಿದ್ದ ಕರಣ್‌ ಆಚಾರ್ಯ ಅವರ ಜತೆ ತರಬೇತಿ ಪಡೆದಿದ್ದಾರೆ.