ಮಂಗಳೂರಿನಿಂದ ಕುವೈಟ್ ವಿಮಾನಯಾನ 6 ತಿಂಗಳುಗಳಿಂದ ಸ್ಥಗಿತ : ಕರಾವಳಿ ಪ್ರಯಾಣಿಕರ ಸಂಕಷ್ಟ – vishwanews24
ಮಂಗಳೂರಿನಿಂದ ಕುವೈಟ್ ವಿಮಾನಯಾನ 6 ತಿಂಗಳುಗಳಿಂದ ಸ್ಥಗಿತ : ಕರಾವಳಿ ಪ್ರಯಾಣಿಕರ ಪರದಾಟ
ಮಂಗಳೂರು: ಮಂಗಳೂರಿನಿಂದ ಕುವೈಟ್ಗೆ ನೇರ ವಿಮಾನಯಾನ ಸ್ಥಗಿತಗೊಂಡು 6 ತಿಂಗಳುಗಳು ಕಳೆದಿದ್ದು ಕುವೈಟ್ಗೆ ಹೋಗುವ ಹಾಗೂ ಕುವೈಟ್ನಿಂದ ಬರುವ ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಇರಾನ್-ಇಸ್ರೇಲ್, ಅಮೆರಿಕಾ ಯುದ್ಧ ಆರಂಭಗೊಂಡ ಬಳಿಕ (ಫೆ. 28) ಗಲ್ಫ್ ರಾಷ್ಟ್ರಗಳ ವಿಮಾನ ಸಂಪರ್ಕ ಬಹುತೇಕ ಸ್ಥಗಿತಗೊಂಡಿತ್ತು. ಆದರೆ ಯುದ್ಧದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಬಹುತೇಕ ರಾಷ್ಟ್ರಗಳಿಗೆ ವಿಮಾನಯಾನ ಪುನರಾರಂಭಗೊಂಡಿತ್ತು. ಆದರೆ ಕುವೈಟ್ ವಿಮಾನ ಮಾತ್ರ ಮತ್ತೆ ಯಾನ ಆರಂಭಿಸಿಲ್ಲ. ಯುದ್ಧದ ಮೊದಲು ವಾರಕ್ಕೆ 3 ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳು ಕುವೈಟ್-ಮಂಗಳೂರು ನಡುವೆ ಯಾನ ನಡೆಸುತ್ತಿದ್ದವು.
2,186 ಕೋಟಿ ಅನುದಾನ ಬಾಕಿ: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ : ಈಶ್ವರ ಖಂಡ್ರೆ – vishwanews24
ಮಂಗಳೂರಿನ ಸಾವಿರಾರು ಪ್ರಯಾಣಿಕರು ಬೆಂಗಳೂರು, ಮುಂಬಯಿ, ಕ್ಯಾಲಿಕಟ್ ಮೊದಲಾದ ದೂರದ ನಗರಗಳಿಗೆ ತೆರಳಿ ಅಲ್ಲಿಂದ ಕುವೈಟ್ಗೆ ಪ್ರಯಾಣಿಸುತ್ತಿದ್ದಾರೆ. ಇದರಿಂದ ಸಮಯ, ಪ್ರಯಾಣ ವೆಚ್ಚ ತುಂಬಾ ಹೆಚ್ಚಾಗಿದೆ.
ಕುವೈಟ್ ಹೊರತುಪಡಿಸಿದರೆ ಉಳಿದಂತೆ ಅಬುಧಾಬಿ, ಬಹ್ಮನ್, ದಮಾಮ್, ದುಬೈ, ದೋಹ, ಜೆವ್ವಾ, ಮಸ್ಕತ್ ಗಳಿಗೆ ಮಂಗಳೂರಿನಿಂದ ವಿಮಾನ
ಸಂಚಾರವಿದೆ.
