ಮಂಗಳೂರು: ಖ್ಯಾತ ಗಾಯಕಿ ಸುರೇಖಾ ಪೈ ನಿಧನ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಖ್ಯಾತ ಗಾಯಕಿ ಸುರೇಖಾ ಪೈ ನಿಧನ

ಮಂಗಳೂರು: ಸದಾ ನಗುಮುಖದಿಂದ ಎಲ್ಲವನ್ನು ಸ್ವೀಕರಿಸಿ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದ ಮಹಿಳೆ ಎಂದು ಹೊಗಳಿಕೆಯನ್ನು ಸಂಪಾದಿಸಿದ್ದ ಅದ್ಭುತ ಗಾಯಕಿ ಮಂಗಳೂರಿನ ಕದ್ರಿ ನಿವಾಸಿ ಸುರೇಖಾ ಪೈ ಅಸೌಖ್ಯದಿಂದ ನಿನ್ನೆ ಮುಂಜಾನೆ ನಿಧನರಾದರು.

ಜಾಂಡೀಸ್ ಖಾಯಿಲೆಯಿಂದ ಕೂಡ ಬಳಲುತ್ತಿದ್ದ ಇವರು ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರಾಗಿದ್ದರು. ಮೂಲತಃ ಮುಂಬೈಯವರಾದ ಇವರು ಉತ್ತಮ ಗಾಯಕಿಯಾಗಿದ್ದು ಸೋನುನಿಗಮ್ ಸೇರಿದಂತೆ ಪ್ರಸಿದ್ಧ ಗಾಯಕರ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದರು.

ಅವರ ಸ್ವಗೃಹದಲ್ಲೇ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರ ಸಾವಿಗೆ ಕುಟುಂಸ್ಥರು, ಸ್ನೇಹಿತರು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಗಂಗೊಳ್ಳಿಗೆ ಪ್ರಮೋದ್ ಮುತಾಲಿಕ್ ನಿರ್ಬಂಧ ಹೇರಿದ್ದರ ವಿರುದ್ಧ ನ್ಯಾಯಕ್ಕಾಗಿ ಕೊರಗಜ್ಜನ ಮೊರೆ ಹಿಂದೂ ಸಂಘಟನೆಯ ಕಾರ್ಯಕರ್ತರು – Vishwanews24

 

Leave a Reply