ಮಂಗಳೂರು :ಪೊಲೀಸರ ಕರ್ತವ್ಯದಲ್ಲಿ ರಾಜಕಾರಣಿಗಳು ಮೂಗುತೂರಿಸದ, ಕಾನೂನು‌ ಮೀರಿ ವರ್ತಿಸದ ಅಪರೂಪದ ನಗರ ಮಂಗಳೂರು : ನಿರ್ಗಮಿತ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರಿನಲ್ಲಿದ್ದಾಗ ಕೌಟುಂಬಿಕ ವಾತಾವರಣದಲ್ಲಿ ಇದ್ದಂತೆ ಭಾಸವಾಗುತ್ತಿತ್ತು: ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಶಿಕುಮಾರ್

ಮಂಗಳೂರು : ಮಂಗಳೂರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದು ಸಣ್ಣ ಪಿಕ್ ಪಾಕೆಟ್ ಕೂಡ ನಡೆಯುವುದಿಲ್ಲ, ಪೊಲೀಸರ ಕರ್ತವ್ಯದಲ್ಲಿ ರಾಜಕಾರಣಿಗಳು ಮೂಗುತೂರಿಸದ, ಕಾನೂನು‌ ಮೀರಿ ವರ್ತಿಸದ ಅಪರೂಪದ ನಗರ ಮಂಗಳೂರು ಎಂದು ನಿರ್ಗಮಿತ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಮತ್ತು ಸಾರ್ವಜನಿಕರು ಭಾನುವಾರ ಆಯೋಜಿಸಿದ್ದ ಶಶಿಕುಮಾರ್ ಬೀಳ್ಕೊಡುಗೆ ಮತ್ತು ಹೊಸ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ದಕ್ಷಿಣಕನ್ನಡ ಜಿಲ್ಲೆಯ ಜನರು ಸುಸಂಸ್ಕೃತರು ಆದರೆ ಪೂರ್ವಗ್ರಹಪೀಡಿತರು ಈ ನಗರಕ್ಕೆ ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿ ಕೊಟ್ಟಿದ್ದಾರೆ. ಇಲ್ಲಿನ ಜನರು ಇಲಾಖೆಯ ಎಲ್ಲ ಆದೇಶಗಳನ್ನು ಬೇಸರವಿಲ್ಲದೆ ಪಾಲಿಸುತ್ತಾರೆ ಎಂದರು.

ಕುಂದಾನಗರಿಯತ್ತ ಪ್ರಧಾನಿ ಪ್ರಯಾಣ  : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮನ ; ಬೃಹತ್ ರೋಡ್ ಶೋ – Vishwanews24

ಮಂಗಳೂರಿನಲ್ಲಿದ್ದಾಗ ಕೌಟುಂಬಿಕ ವಾತಾವರಣದಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಆರಂಭದ 2 ತಿಂಗಳು ಕೆಲಸಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ನಂತರ ಎಲ್ಲವೂ ಸುಸೂತ್ರವಾಗಿ ನಡೆಯಿತು. ಇಲಾಖೆಯ ಎಲ್ಲರೂ ಕೈಜೋಡಿಸಿ ನನ್ನ ಕೆಲಸ ಸುಲಭ ಮಾಡಿದರು ಎಂದರು.

Leave a Reply