ಮಂಗಳೂರು : ಸುಳ್ಯ ತಾಲೂಕಿನಾದ್ಯಂತ ಮತ್ತೆ ಕಂಪಿಸಿದ ಭೂಮಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಸುಳ್ಯ ತಾಲೂಕಿನಾದ್ಯಂತ ಮತ್ತೆ ಕಂಪಿಸಿದ ಭೂಮಿ – Vishwanews24

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಾದ್ಯಂತ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಧ್ಯರಾತ್ರಿ ಉಂಟಾದ ಭೀಕರ ಶಬ್ಧ ಮತ್ತು ಕಂಪನದಿಂದ ಜನತೆ ಭೀತಿಗೊಂಡಿದ್ದು, ಎಚ್ಚರಗೊಂಡಿದ್ದಾರೆ.

ಒಂದೇ ವಾರದಲ್ಲಿ 4ನೇ ಬಾರಿ ಭೂಕಂಪನದ ಅನುಭವವಾಗಿದೆ. ರಾತ್ರಿ 1.15 ರ ವೇಳೆಗೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸಂಪಾಜೆ ಹಾಗು ಸಮೀಪದ ಪ್ರದೇಶ, ಸುಳ್ಯ ನಗರ ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭೂ ಕಂಪನದ ಆಗಿರುವ ಬಗ್ಗೆ ಜನರು ದೂರವಾಣಿಯ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅನುಭವ ಹಂಚಿಕೊಂಡಿದ್ದಾರೆ.

ಗುತ್ತಿಗಾರು, ತೊಡಿಕಾನ, ಉಬರಡ್ಕ, ಅರಂತೋಡು, ಸಂಪಾಜೆ ಸೇರಿದಂತೆ ಎಲ್ಲಾ ಕಡೆ ಭೂಮಿ‌ ಕಂಪಿಸಿದೆ. ಇದೀಗ ವಾರದಲ್ಲಿ ನಾಲ್ಕನೇ ಬಾರಿ ಭೂ ಕಂಪನ ಉಂಟಾಗಿದ್ದು, ಜನರ ಆತಂಕ ಹೆಚ್ಚಿಸಿದೆ. ಜೂ.25 ರಂದು ಬೆಳಿಗ್ಗೆ 9.10 ಕ್ಕೆ 2.3 ತೀವ್ರತೆಯ ಭೂ ಕಂಪನ ಆಗಿತ್ತು. ಜೂ.28 ರಂದು ಎರಡು ಬಾರಿ ಭೂಮಿ ನಲುಗಿತ್ತು. ಬೆಳಗ್ಗೆ ರಿಕ್ಟರ್ ಸ್ಕೇಲ್‌ನಲ್ಲಿ 3 ತೀವ್ರತೆಯ ಹಾಗು ಸಂಜೆ 1.8 ತೀವ್ರತೆಯ ಕಂಪನ ಉಂಟಾಗಿತ್ತು.

ನಿರಂತರವಾಗಿ ಭೂಕಂಪನವಾಗುತ್ತಿರುವುದು ಹಾಗೂ ಭಾರಿ ಮಳೆ ಕೂಡ ಆಗುತ್ತಿರುವುದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಸಂಪಾಜೆಯಲ್ಲಿ ಕೆಲವರು ಮನೆಯಿಂದ ಹೊರಗೋಡಿ ಬಂದಿದ್ದಾರೆ.

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 198 ರೂ. ಇಳಿಕೆ – Vishwanews24

Leave a Reply