ಮಂಗಳೂರು:ಭಾರೀ ಮಳೆಗೆ ಮತ್ತೆ ಕುಸಿಯಲಾರಂಭಿಸಿದ ಕೆತ್ತಿಕಲ್ ಗುಡ್ಡ – vishwanews24
ಮಂಗಳೂರು:ಭಾರೀ ಮಳೆಗೆ ಮತ್ತೆ ಕುಸಿಯಲಾರಂಭಿಸಿದ ಕೆತ್ತಿಕಲ್ ಗುಡ್ಡ
ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರ ಆಕ್ಷೇಪ
ಮಂಗಳೂರು: ವಾಮಂಜೂರು ತಿರುವೈಲು ಶಾಲೆಯ ಸಮೀಪದ ಕೆತ್ತಿಕಲ್ ಗುಡ್ಡ ಮಂಗಳವಾರ ಮತ್ತೆ ಕುಸಿತಗೊಂಡಿದ್ದು, ಮಣ್ಣು ಹಾಗೂ ಬಂಡೆ ಕಲ್ಲುಗಳು ರಸ್ತೆಗೆ ಉರುಳಿದೆ.
ಕೆಲವು ದಿನಗಳ ಹಿಂದೆ ಅದೇ ಜಾಗದಲ್ಲಿ ಕುಸಿತವಾಗಿ ಗುಡ್ಡದ ಮಣ್ಣು ಹೆದ್ದಾರಿಗೆ ಬಿದ್ದಿತ್ತು. ಆ ಬಳಿಕ ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿತ್ತು. ಕಳೆದು ಎರಡು ದಿನಗಳಿಂದ ಸುರಿದ ನಿರಂತರ ಮಳೆಗೆ ಮತ್ತೆ ಕುಸಿತವಾಗುತ್ತಿದೆ. ಮಂಗಳವಾರ ಮಧ್ಯಾಹ್ನದ ವೇಳೆ ಭಾರೀ ಪ್ರಮಾಣದಲ್ಲಿ ಮಣ್ಣು ಹಾಗೂ ಬಂಡೆ ಕುಸಿದಿದೆ. ಗುಡ್ಡದ ಮೇಲೆ ಮಣ್ಣು ಹಾಗೂ ಬಂಡೆ ಬಿರುಕು ಬಿಟ್ಟು ನಿಂತಿದ್ದು ಮತ್ತಷ್ಟು ಕುಸಿತದ ಆತಂಕವಿದೆ.
ಕಟಪಾಡಿ : ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ – vishwanews24
ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರ ಆಕ್ಷೇಪ
ಕಳೆದ ವರ್ಷ ಭಾರೀ ಮಳೆಯ ಸಂದರ್ಭದಲ್ಲಿ ಕೆತ್ತಿಕಲ್‌ನ ವಿವಿಧ ಭಾಗಗಳಲ್ಲಿ ಕುಸಿದಿತ್ತು. ಅಸಮರ್ಪಕ ವಾಗಿ ಅಗೆದಿರುವ ಜಾಗಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿ ಕಾರಿಯವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ತಿರುವೈಲು ಶಾಲೆಯ ಸಮೀಪದಲ್ಲಿ ಸಮರ್ಪಕ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಿಲ್ಲ. ನಿರಂತರವಾಗಿ ಗುಡ್ಡದ ಮಣ್ಣು ಅವೈಜ್ಞಾನಿಕ ರೀತಿಯಲ್ಲಿ ಅಗೆದಿ ರುವುದರಿಂದ ಕುಸಿತ ಮುಂದುವರಿ ದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಡ್ಡದ ಮೇಲ್ಬಾಗ ದಲ್ಲೂ ಮನೆಗಳಿದ್ದು, ಅವರೂ ಅಪಾಯವನ್ನು ಎದುರಿಸುತ್ತಿದ್ದಾರೆ.
