ಮುಲ್ಕಿ:  ತೀವ್ರ ಜ್ವರದಿಂದ ಯುವಕ ನಿಧನ – Vishwanews24

Featured, ದಕ್ಷಿಣ ಕನ್ನಡ

ಮುಲ್ಕಿ:  ತೀವ್ರ ಜ್ವರದಿಂದ ಯುವಕ ನಿಧನ

ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳಿಂಜೆ ಪಟ್ಟೆ ಕ್ರಾಸ್ ನ ಯುವಕನೊಬ್ಬ ತೀವ್ರ ಜ್ವರದಿಂದ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ.

ಮೃತ ಯುವಕನನ್ನು ಸ್ಥಳೀಯ ಆಟೋ ಚಾಲಕ ಮಾರ್ಕ್ ವಾಸ್ ಎಂಬವರ ಪುತ್ರ ಮ್ಯಾಕ್ವಿನ್ ವಾಸ್ (25) ಎಂದು ಗುರುತಿಸಲಾಗಿದೆ.

ಮ್ಯಾಕ್ವಿನ್ ವಾಸ್ ಇಂಜಿನಿಯರ್ ಆಗಿದ್ದು, ಮೈಸೂರಿನ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಿನ್ನಿಗೋಳಿಯಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಆದರೆ ಊರಿಗೆ ಬಂದ ಬಳಿಕ ಏಕಾಏಕಿ ಜ್ವರ ಬಾಧಿಸಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತ ಯುವಕ ಕುಟುಂಬಕ್ಕೆ ಆಧಾರವಾಗಿದ್ದು, ತಂದೆ ತಾಯಿ ಮತ್ತು ಸಹೋದರನನ್ನು ಅಗಲಿದ್ದು, ಮನೆಯಲ್ಲಿ ರೋದನ ಮುಗಿಲು ಮುಟ್ಟಿದೆ.

ಕಾಂಗ್ರೆಸ್ ನಲ್ಲಿ ಮುಂದುವರೆದ `CM’ ಹುದ್ದೆ ಪೈಪೋಟಿ : ಇಂದೇ ಅಧಿಕೃತ ಘೋಷಣೆ ಸಾಧ್ಯತೆ – Vishwanews24

 

Leave a Reply