ಮೇ 1 ರಿಂದ LPG ನಿಯಮಗಳಲ್ಲಿ ಭಾರೀ ಬದಲಾವಣೆ – vishwanews24
ಮೇ 1 ರಿಂದ LPG ನಿಯಮಗಳಲ್ಲಿ ಭಾರೀ ಬದಲಾವಣೆ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿ ಮತ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಬಳಕೆಯ ನಿಯಮಗಳಲ್ಲಿ ದೊಡ್ಡ ಬದಲಾವಣೆಗಳಾಗುತ್ತಿವೆ.
ಪೆಟ್ರೋಲಿಯಂ ಕಂಪನಿಗಳಾದ ಇಂಡೇನ್, ಭಾರತ್ ಗ್ಯಾಸ್ ಮತ್ತು ಹೆಚ್ಪಿ ಗ್ಯಾಸ್ ಮೇ 1, 2026 ರಿಂದ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿ ಸಿದ್ಧಪಡಿಸಿವೆ.
ಹೊಸ ಗ್ಯಾಸ್ ಕನೆಕ್ಷನ್ ಪಡೆಯುವಂತಿಲ್ಲ!
ದೇಶದಲ್ಲಿ ಎಲ್ಪಿಜಿ ಬೇಡಿಕೆ ಹೆಚ್ಚುತ್ತಿರುವುದರಿಂದ, ಪ್ರಸ್ತುತ ಇರುವ ಗ್ರಾಹಕರಿಗೆ ಸಮರ್ಪಕವಾಗಿ ಗ್ಯಾಸ್ ಪೂರೈಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಗ್ಯಾಸ್ ಕನೆಕ್ಷನ್ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕನಿಷ್ಠ ಒಂದು ತಿಂಗಳ ಕಾಲ ಯಾರಿಗೂ ಹೊಸ ಸಂಪರ್ಕ ಸಿಗಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:
ಸಿಲಿಂಡರ್ ಬುಕಿಂಗ್ ನಡುವೆ ಇರಬೇಕು ಗ್ಯಾಪ್
ಇನ್ನು ಮುಂದೆ ನಿಮಗೆ ಇಷ್ಟ ಬಂದಾಗ ಗ್ಯಾಸ್ ಬುಕ್ ಮಾಡಲು ಸಾಧ್ಯವಿಲ್ಲ. ಬುಕಿಂಗ್ ಅವಧಿಯ ಮೇಲೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರುತ್ತಿದೆ.
ನಗರ ಪ್ರದೇಶಗಳಲ್ಲಿ: ಎರಡು ಸಿಲಿಂಡರ್ ಬುಕಿಂಗ್ ನಡುವೆ ಕನಿಷ್ಠ 25 ದಿನಗಳ ಅಂತರವಿರಬೇಕು.
ಗ್ರಾಮೀಣ ಪ್ರದೇಶಗಳಲ್ಲಿ: ಎರಡು ರೀಫಿಲ್ ಬುಕಿಂಗ್ ನಡುವೆ 45 ದಿನಗಳ ಅಂತರವಿರಬೇಕು. ದೊಡ್ಡ ಕುಟುಂಬಗಳಿಗೆ ಈ ನಿಯಮ ತುಸು ಸಂಕಷ್ಟ ತರಬಹುದು, ಹೀಗಾಗಿ ಗ್ಯಾಸ್ ಮಿತವಾಗಿ ಬಳಸುವಂತೆ ಸೂಚಿಸಲಾಗಿದೆ.
ಒಟಿಪಿ (OTP) ಇಲ್ಲದೆ ಸಿಲಿಂಡರ್ ಸಿಗಲ್ಲ
ಗ್ಯಾಸ್ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಅಕ್ರಮಗಳನ್ನು ತಡೆಯಲು ಒಟಿಪಿ ಆಧಾರಿತ ವಿತರಣೆಯನ್ನು (DAC)
ಕಡ್ಡಾಯಗೊಳಿಸಲಾಗಿದೆ. ಸಿಲಿಂಡರ್ ಮನೆಗೆ ಬಂದಾಗ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಕೋಡ್ ಅನ್ನು ವಿತರಕ ಸಂಸ್ಥೆಯವರಿಗೆ ನೀಡಿದರೆ ಮಾತ್ರ ಸಿಲಿಂಡರ್ ಡೆಲಿವರಿ ಆಗುತ್ತದೆ.
ಇದನ್ನೂ ಓದಿ:
ದಕ್ಷಿಣ ಕನ್ನಡ : ಕರಾವಳಿಯಲ್ಲಿ ಏರುತ್ತಿರುವ ತಾಪಮಾನ; ಬಿಸಿಲಾಘಾತದ ಆತಂಕ – vishwanews24
