ಮೋದಿಯನ್ನು ನೋಡಲು ದೆಹಲಿಗೆ ಹೋಗುವ ಅಗತ್ಯವಿಲ್ಲ, ಕಾಪುವಿನ ಗುರ್ಮೆ ಮೋದಿ ಇದ್ದಂತೆ : ಹರಿಕೃಷ್ಣ ಬಂಟ್ವಾಳ – vishwanews24
ಮೋದಿಯನ್ನು ನೋಡಲು ದೆಹಲಿಗೆ ಹೋಗುವ ಅಗತ್ಯವಿಲ್ಲ , ಕಾಪುವಿನ ಗುರ್ಮೆ ಮೋದಿ ಇದ್ದಂತೆ : ಹರಿಕೃಷ್ಣ ಬಂಟ್ವಾಳ
ಕಾಪು: ಪ್ರಧಾನಮಂತ್ರಿ ನರೇಂದ್ರ ಮೋದಿಯಂತೆ ಮನಸ್ಸು ಮತ್ತು ವರ್ಚಸ್ಸು ಹೊಂದಿರುವ ನಾಯಕನನ್ನು ಬಿಜೆಪಿ ಕಾಪುವಿನ ಅಭ್ಯರ್ಥಿಯನ್ನಾಗಿ ಗುರುಮಿ ಸುರೇಶ್ ಶೆಟ್ಟಿಯನ್ನು ಮಾಡಿದೆ ಅವರನ್ನ ಗೆಲ್ಲಿಸುವ ಮುಖೇನ ನಮ್ಮ ನೆಚ್ಚಿನ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರ ಕೈಯನ್ನ ಬಲಪಡಿಸುವಂತೆ ಬಿಜೆಪಿ ಹಿರಿಯ ಮುಖಂಡ ಹರಿಕೃಷ್ಣ ಬಂಟ್ವಾಳ ಕರೆ ನೀಡಿದ್ದಾರೆ.
ಜನಸಾಮಾನ್ಯರ ನಾಯಕನಾಗಿರುವ ಬಡವರ ಪಾಲಿನ ಆಶಾಕಿರಣ ಎಂದೇ ಕರೆಸಿಕೊಂಡಿರುವ ಗುರುವಿನ ಸುರೇಶ್ ಶೆಟ್ಟಿ ಅವರಿಗೆ ಈ ಬಾರಿ ಮತದಾನ ಮಾಡುವ ಮುಖಾಂತರ ಅವರನ್ನ ವಿಧಾನಸಭೆಗೆ ಕಳುಹಿಸುವ ಜವಾಬ್ದಾರಿ ಮತದಾರರ ಕೈಯಲ್ಲಿದೆ ಎಂದು ಅವರು ಹೇಳಿದರು.
ಕ್ಷೇತ್ರದಾದ್ಯಂತ ಮತದಾರರು ಹೊಸ ಉಡುಪಿನಿಂದ ಬಿಜೆಪಿಗೆ ವ್ಯಾಪಕ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದ್ದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿರುವ ಮತದಾರರು ಮೇ 10 ನಡೆಯುವ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಹೊಸ ಬಾಷ್ಯ ಬರೆಯಬೇಕಾಗಿದೆ ಎಂದು ಅವರು ತಿಳಿಸಿದರು.
