ಕಾಪು: ಸೋತರು ಕ್ಷೇತ್ರದಲ್ಲಿ ಜನರ ಸೇವೆ – ಜನರ ವಿಶ್ವಾಸ ಮತ್ತು ನಂಬಿಕೆಗೆ ಬೆಲೆ ಕೊಡುವ ರಾಜಕಾರಣಿ ಸೊರಕೆಯನ್ನು ಗೆಲ್ಲಿಸೋಣ : ಸುಧೀರ್ ಕುಮಾರ್ ಮರೋಳಿ – Vishwanews24
ಕಾಪು: ಸೋತರು ಕ್ಷೇತ್ರದಲ್ಲಿ ಜನರ ಸೇವೆ – ಜನರ ವಿಶ್ವಾಸ ಮತ್ತು ನಂಬಿಕೆಗೆ ಬೆಲೆ ಕೊಡುವ ರಾಜಕಾರಣಿ ಸೊರಕೆಯನ್ನು ಗೆಲ್ಲಿಸೋಣ : ಸುಧೀರ್ ಕುಮಾರ್ ಮರೋಳಿ
ಕಾಪು: ಧರಿಸುವ ಬಟ್ಟೆಯಷ್ಟೇ ಶುಭ್ರವಾದ ವ್ಯಕ್ತಿತ್ವವನ್ನು ಹೊಂದಿರುವ ಹಾಗೂ ಜನರ ವಿಶ್ವಾಸ ಮತ್ತು ನಂಬಿಕೆಗೆ ಬೆಲೆ ಕೊಡುವ ರಾಜಕಾರಣಿ ಕಾಪುವಿನ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯನ್ನು ದೂಷಿಸಲು ಬಿಜೆಪಿ ಅವರಿಗೆ ಯಾವುದೇ ಕಾರಣಗಳು ಸಿಗುತ್ತಿಲ್ಲ ಕಾಪುವಿನಲ್ಲಿ ಸ್ವರಕ್ಕೆ ಶಾಸಕರಾಗಿ ಸಚಿವರಾಗಿದ್ದ ನಡೆಸಿರುವ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ನಿಮ್ಮ ಮುಂದಿದೆ.
ಪಕ್ಷದ ಆಂತರಿಕ ಕಾರಣಕ್ಕಾಗಿ ಸಚಿವ ಸ್ಥಾನ ಕೈ ತಪ್ಪಿದರೂ ಬೇಸರ ವ್ಯಕ್ತಪಡಿಸದೆ ಕಾಪು ತಾಲೂಕು ಆಗಲೇಬೇಕು ಎಂದು ಹೋರಾಟ ನಡೆಸಿ ತಾಲೂಕು ಘೋಷಣೆ ಮಾಡಿಸಿ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ ಸೋತ ನಂತರ ಅತಿ ಹೆಚ್ಚು ಜನ ಸಂಪರ್ಕವನ್ನು ಇಟ್ಟುಕೊಂಡಿರುವ ಅವರನ್ನು ಕಾಪುವಿನ ಜನ ಈ ಬಾರಿ ಖಂಡಿತವಾಗಿಯೂ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಸ್ವರಕ್ಕೆ ಅವರ ಗೆಲುವಿಗಾಗಿ ಪಕ್ಷದ ಮುಖಂಡರು ಕಾರ್ಯಕರ್ತರು ಮತದಾರರು ಕಟ್ಟಿಬದ್ಧರಾಗಿ ಕೆಲಸ ಮಾಡುವಂತೆ ವಿನಂತಿ ಮಾಡಿದರು.
