ರಸ್ತೆ ಅಪಘಾತ : ಕಾಪುವಿನ ಹಿರಿಯ ಟೈಲರ್ ಬಾಬು ಶೆಟ್ಟಿಗಾರ್ ನಿಧನ – vishwanews24
ರಸ್ತೆ ಅಪಘಾತ : ಕಾಪುವಿನ ಹಿರಿಯ ಟೈಲರ್ ಬಾಬು ಶೆಟ್ಟಿಗಾರ್ ನಿಧನ
ಕಾಪು : ಕಾಪುವಿನ ಹಿರಿಯ ಟೈಲರ್ ಬಾಬು ಶೆಟ್ಟಿಗಾರ್ (70) ಅವರು ಮಂಗಳವಾರ (ಡಿ.10 ರಂದು) ಮಂಜಾನೆ ರಾಷ್ಟ್ರೀಯ ಹೆದ್ದಾರಿ ಉದ್ಯಾವರದಲ್ಲಿ ರಸ್ತೆ ಅಪಘಾತದಿಂದಾಗಿ ಮೃತಪಟ್ಟಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿರುವ ಸಹೋದರನ ಆರೈಕೆಯಲ್ಲಿದ್ದ ಅವರು ಮಂಗಳವಾರ ಮುಂಜಾನೆ ಕಾಪುವಿಗೆ ಮರಳುತ್ತಿದ್ದಾಗ ನಡೆದ ಅಪಘಾತದಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಉಡುಪಿ – ಮಂಗಳೂರು ರಸ್ತೆಯಲ್ಲಿರುವ ಉದ್ಯಾವರ ಹಲೀಮಾ ಸಾಬ್ಜು ಸಭಾಂಗಣ ಬಳಿಯ ಶೋರೂಂ ಬಳಿ ಈ ಅಪಘಾತ ಸಂಭವಿಸಿದೆ
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ದೇಶದ ಸರ್ವೋತ್ತಮ ಜಿ.ಪಂ. ಹೆಗ್ಗಳಿಕೆಗೆ ಪಾತ್ರವಾದ ಉಡುಪಿ ಜಿಲ್ಲಾ ಪಂಚಾಯತ್ – vishwanews24
