ರಾಮ ರಾಜ್ಯ ನಿರ್ಮಾಣ ಮಾಡುತ್ತೇವೆಂದು ಹೊರಟವರ ಸರ್ಕಾರ ಇದೇನಾ ??: ಕುಮಾರಸ್ವಾಮಿ -Vishwanews24
ರಾಮ ರಾಜ್ಯ ನಿರ್ಮಾಣ ಮಾಡುತ್ತೇವೆಂದು ಹೊರಟವರ ಸರ್ಕಾರ ಇದೇನಾ ??: ಕುಮಾರಸ್ವಾಮಿ -Vishwanews24
ಬೆಂಗಳೂರು: ನಿನ್ನೆ ಸಂಜೆ ರಿಲೀಸ್ ಆದ ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಎಲ್ಲೆಲ್ಲು ಭಾರೀ ಚರ್ಚೆಯಾಗುತ್ತಿದೆ. ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಕೂಡ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ರಾಮ ರಾಜ್ಯ ನಿರ್ಮಾಣ ಮಾಡುತ್ತೇವೆಂದು ಹೊರಟವರ ಸರ್ಕಾರ ಇದೇನಾ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ರಾಕ್ಷಸ ಸರ್ಕಾರವಿದೆ ಎಂದು ನಮ್ಮ ಸರ್ಕಾರವನ್ನು ಬೀಳಿಸಿ, ಬಾಂಬೆಗೆ ಹೋಗಿ ರಾಮರಾಜ್ಯವನ್ನು ತಂದಿದ್ದೇವೆ ಎಂದರಲ್ಲ ಯಾವ ರಾಮ ರಾಜ್ಯ ತಂದ್ರು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
BREAKING : ರಾಸಲೀಲೆ ವಿಡಿಯೋ ಪ್ರಕರಣ : ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ -Vishwanews24
ಇನ್ನು ಇಂಥಹ ವಿಚಾರಗಳ ಬಗ್ಗೆ ಮಾತಾಡೋದು ಶೋಭೆ ಅಲ್ಲ. ಇಂಥ ವಿಚಾರಗಳಲ್ಲಿ ರಾಜಕೀಯ ತರೋದು ಅಲ್ಲ. ಆದ್ರೆ ರಾಜಕೀಯ ವ್ಯಕ್ತಿಗಳ ಈ ರೀತಿಯ ನಡೆಯಿಂದ ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ.
ಇಂಥ ವಿಚಾರಗಳಿಗೆಲ್ಲಾ ಸಿಎಂ ಯಡಿಯೂರಪ್ಪ ಅವರ ಬಳಿ ಹಾಗೂ ಬಿಜೆಪಿ ನಾಯಕರ ಬಳಿ ಉತ್ತರ ಪಡೆಯುವುದು ಉತ್ತಮ. ಇನ್ನು ವಿಶ್ವನಾಥ್ ಅವರ ಹತ್ತಿರ ಈ ಬಗ್ಗೆ ಉತ್ತರ ಪಡೆಯಿರಿ ನಾನೇನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
