ಲಾಕ್‍ಡೌನಿಂದಾಗಿ ತೊಂದರೆ-ಬಡ ಕುಟುಂಬಗಳಿಗೆ ಕಾಪು ಜೇಸಿಐ ವತಿಯಿಂದ ಪಡಿತರ ಕಿಟ್‍ಗಳ ವಿತರಣೆ: vishwanews24

Featured, ಉಡುಪಿ

ಕಾಪು : ಕೊರೊನಾ ವೈರಸ್ ಆತಂಕ ಮತ್ತುಲಾಕ್‍ಡೌನಿಂದಾಗಿ ತೊಂದರೆಗೊಳಗಾಗಿರುವ ಕಾಪು ಪುರಸಭೆ ವ್ಯಾಪ್ತಿಯ ಉಳಿಯಾರಗೋಳಿ ಮತ್ತು ಮಜೂರು ಗ್ರಾಮದ ಬಡ ಕುಟುಂಬಗಳಿಗೆ ಕಾಪು ಜೇಸಿಐ ವತಿಯಿಂದ ಪಡಿತರ ಕಿಟ್‍ಗಳನ್ನುವಿತರಿಸಲಾಯಿತು.ಈ ಸಂದರ್ಭ ರಾಕೇಶ್ ಕುಂಜೂರು ಮಾತನಾಡಿ, ಮಾರಕಕೋವಿಡ್19 ರೋಗದಿಂದ ಬಡ ಕೂಲಿ ಕಾರ್ಮಿಕ ವರ್ಗ ಅತ್ಯಂತ ಸಂಕಷ್ಠದಲ್ಲಿದೆ. ಅಂತೆಯೇ ಹಲವಾರು ಕುಟುಂಬಗಳು ಬಾಡಿಗೆ ಮನೆಯಲ್ಲಿದ್ದು, ಪಡಿತರ ವಂಚಿತವಾಗಿದೆ. ಆ ಕುಟುಂಬಗಳನ್ನು ಗುರುತಿಸಿ ಕಾಪು ಜೆಸಿಐ ಸಂಸ್ಥೆ ಅತಿ ಅವಶ್ಯಕ ವಸ್ತುಗಳನ್ನು ಅವರ ಮನೆಗೆ ವಿತರಿಸಿದ್ದೇವೆ ಎಂದರು.ಮಜೂರು ಗ್ರಾ.ಪಂ. ಅದ್ಯಕ್ಷ ಸಂದೀಪ್ ರಾವ್, ಪೂರ್ವವಲಯಾಧ್ಯಕ್ಷ ರಾಕೇಶ್ ಕುಂಜೂರು, ಕಾಪು ಜೇಸಿಐ ಅಧ್ಯಕ್ಷ ವಿನೋದ್ ಕಾಂಚನ್, ಪೂರ್ವಾಧ್ಯಕ್ಷೆ ಸೌಮ್ಯರಾಕೇಶ್, ಕಾರ್ಯದರ್ಶಿ ಸಂತೋಷ್ ಕಾಪು, ನಾಗಭೂಷಣ್ ಉಪಸ್ಥಿತರಿದ್ದರು.

facebooklink

youtube link