ವರ್ಗಾವಣೆ ಆಗಿದ್ದ ಎಸಿ ಡಾ.ಮಧುಕೇಶ್ವರ್ ಎಸಿಬಿ ಬಲೆಗೆ, ಲಕ್ಷಾಂತರ ರೂಪಾಯಿ ನಗದು ಪತ್ತೆ.
ವರ್ಗಾವಣೆ ಆಗಿದ್ದ ಎಸಿ ಡಾ.ಮಧುಕೇಶ್ವರ್ ಎಸಿಬಿ ಬಲೆಗೆ, ಲಕ್ಷಾಂತರ ರೂಪಾಯಿ ನಗದು ಪತ್ತೆ.
ಕುಂದಾಪುರ: ಕುಂದಾಪುರ ವಿಭಾಗದ ಸಹಾಯಕ ಕಮೀಷನರ್ ಆಗಿದಗ್ ಡಾ ಮಧುಕೇಶ್ವರ್ ಮನೆಗೆ ಇಂದು ಮಧ್ಯಾಹ್ನ ಸುಮಾರು 7 ಮಂದಿ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.
ಕುಂದಾಪುರದ ಸರಕಾರಿ ಬಂಗಲೆಯ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು ರೂಪಾಯಿ 1,28,000/-ನಗದು ಹಣವನ್ನು ಜಪ್ತಿ ನಡೆಸಲಾಗಿದೆ ಎನ್ನಲಾಗಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೆ ಕುಂದಾಪುರದಿಂದ ವರ್ಗಾವಣೆಯಾಗಿದ್ದರೂ ಜನಸಾಮಾನ್ಯರ ದಾಖಲೆಗಳನ್ನ ಕೊಡಲು ಹಿಂದೇಟು ಹಾಕುತ್ತಿದ್ದರು ಎಂಬ ದೂರಿನ ಹಿನ್ನಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.
