ವಾಣಿಜ್ಯ LPG ಸಿಲಿಂಡರ್ನ ಬೆಲೆ ₹135 ರಷ್ಟು ಕಡಿತ – Vishwnaews24
ವಾಣಿಜ್ಯ ಎಲ್ ಪಿಜಿ ಸಿಲಿಂಡರ್ನ ಬೆಲೆ ₹135 ರಷ್ಟು ಕಡಿತ
ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ನ ಬೆಲೆಯನ್ನು ಸುಮಾರು ₹135 ರಷ್ಟು ಕಡಿತಗೊಳಿಸಿದೆ.
ಜೂನ್ 1 ರಂದು ಬೆಲೆಯನ್ನು ಕಡಿಮೆ ಮಾಡಿದ ನಂತರ, ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ 2354 ರೂ.ಗಳ ಬದಲು 2219 ರೂ. ಅದೇ ರೀತಿ ಕೋಲ್ಕತಾದಲ್ಲಿ 2454 ರೂ.ಗಳ ಬದಲು 2322 ರೂ., ಮುಂಬೈನಲ್ಲಿ 2306 ರೂ.ಗಳ ಬದಲು 2171.50 ರೂ., ಚೆನ್ನೈನಲ್ಲಿ 2507 ರೂ.ಗಳ ಬದಲು 2373 ರೂ.ಗೆ ಇಳಿಕೆಯಾಗಿವೆ.
ಆದಾಗ್ಯೂ, ಕಂಪನಿಗಳಿಂದ ದೇಶೀಯ ಎಲ್ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ₹ 200 ಸಬ್ಸಿಡಿ ಪಡೆಯುತ್ತಾರೆ. ಈ ಸಬ್ಸಿಡಿಯು ವರ್ಷಕ್ಕೆ 12 ಸಿಲಿಂಡರ್ ಗಳವರೆಗೆ ಮಾತ್ರ ಲಭ್ಯವಿರುತ್ತದೆ. ಸರ್ಕಾರದ ಈ ಕ್ರಮದಿಂದ 9 ಕೋಟಿಗೂ ಹೆಚ್ಚು ಗ್ರಾಹಕರು ಪ್ರಯೋಜನ ಪಡೆದಿದ್ದಾರೆ.
ಮಂಗಳೂರು: ಬಿಕರ್ನಕಟ್ಟೆ ಅಪಘಾತ – ಮೃತಪಟ್ಟ ಯುವಕನ ಅಂಗಾಂಗ ದಾನ ವಿಫಲ – Vishwanews24
