ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು  ಆನ್‌‌ಲೈನ್‌ ಕ್ಲಾಸ್ ಬಂದ್‌ ಮಾಡುವಂತಿಲ್ಲ : ಸುರೇಶ್‌ ಕುಮಾರ್‌‌ – Vishwanews24

Featured, ರಾಜ್ಯ ನ್ಯೂಸ್

ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು  ಆನ್‌‌ಲೈನ್‌ ಕ್ಲಾಸ್ ಬಂದ್‌ ಮಾಡುವಂತಿಲ್ಲ : ಸುರೇಶ್‌ ಕುಮಾರ್‌‌ – Vishwanews24

ಬೆಂಗಳೂರು : ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ವಿದ್ಯಾರ್ಥಿಗಳಿಗೆ ಆನ್‌‌ಲೈನ್‌ ಕ್ಲಾಸ್ ಬಂದ್‌ ಮಾಡುವಂತಿಲ್ಲ. ಅಂತಹ ಶಾಲೆಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌‌ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವುದೇ ಶಾಲೆಗಳು ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿ ಮಾಡಿಲ್ಲ ಎಂದು ಆ‌ನ್‌‌ಲೈನ್‌ ಕ್ಲಾಸ್‌ ಬಂದ್ ಮಾಡುವಂತಿಲ್ಲ. ಒಂದು ವೇಳೆ ಬಂದ್‌ ಮಾಡಿದ ಬಗ್ಗೆ ದೂರು ದಾಖಲಾದಲ್ಲಿ ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಆನ್‌‌ಲೈನ್‌ ಕ್ಲಾಸ್ ಬಂದ್‌ ಮಾಡುವಂತ ಶಾಲೆಗಳ ವಿರುದ್ದ ಕ್ರಮಕ್ಕೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೂ ಸೂಚಿಸಿದ್ದಾರೆ. ಅಲ್ಲದೇ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌‌ನ ಸೂಚನೆ ಕೂಡಾ ಇದೆ ಎಂದು ತಿಳಿಸಿದ್ದಾರೆ.

ಶಾಲಾ ಶುಲ್ಕ ಕಟ್ಟಿಲ್ಲವೆಂದು ಆನ್‌ಲೈನ್‌ ಕ್ಲಾಸ್‌‌ ಬಂದ್‌‌ ಮಾಡಿರುವ ವಿಚಾರದ ಬಗ್ಗೆ ಪೋಷಕರು ಕೂಡಾ ದೂರು ಸಲ್ಲಿಸಬಹುದು. ನನಗೆ ಅಥವಾ ಶಾಲಾ ವ್ಯಾಪ್ತಿಯ ಬಿಇಓ ಗಳಿಗೆ ದೂರು ನೀಡಿದ್ದಲ್ಲಿ, ಅಂತಹ ಶಾಲೆಗಳ ವಿರುದ್ದ ಕಾನೂನು ಕ್ರಮಕೈಗೊಳ್ಳ ಲಾಗುತ್ತದೆ ಎಂದಿದ್ದಾರೆ.