ಶಿರ್ವ: ಗೂಗಲ್ ಪೇಗೆ ಹಣ ಜಮೆಯಾದ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಗೆ ₹2.49 ಲಕ್ಷ ವಂಚನೆ – vishwanews24
ಶಿರ್ವ: ಗೂಗಲ್ ಪೇಗೆ ಹಣ ಜಮೆಯಾದ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಗೆ ₹2.49 ಲಕ್ಷ ವಂಚನೆ
ಶಿರ್ವ: ಮೊಬೈಲಿನಲ್ಲಿರುವ ಗೂಗಲ್ ಪೇ ಗೆ ಹಣ ಜಮಾ ಆದ ಬಗ್ಗೆ ಅಪರಿಚಿತರು ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 2,49,299.73 ರೂ. ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿದ ಘಟನೆ ಕಳತ್ತೂರಿನಲ್ಲಿ ಸಂಭವಿಸಿದೆ. ಕಳತ್ತೂರು ಬರೆಬೆಟ್ಟು ಹೊಸ ಮನೆ ವಾಸು ಶೆಟ್ಟಿ (57) ವಂಚನೆಗೊಳಗಾದವರು.
ವಾಸು ಶೆಟ್ಟಿ ಅವರು ತನ್ನ ಹೆಸರಿನಲ್ಲಿ ಕೋ ಆಪರೇಟಿವ್ ಬ್ಯಾಂಕ್ ಒಂದರಲ್ಲಿ ಇಂಡಿವಿಜುವಲ್ ಕರೆಂಟ್ ಅಕೌಂಟ್ ಖಾತೆಯನ್ನು ಹೊಂದಿದ್ದರು. ತಮ್ಮ ಮೊಬೈಲ್ ನಂಬ್ರಕ್ಕೆ ಗೂಗಲ್ ಪೇ ಗೆ ಲಿಂಕ್ ಮಾಡಿ ಅದರ ಮೂಲಕ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು.
ನ.13ರಂದು ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೊದಲ ದಿನದ ವೇಳಾಪಟ್ಟಿ ಪ್ರಕಟ – vishwanews24
ನಂ.9 ರಂದು ಸಂಜೆ ತಮ್ಮ ಮನೆಯಲ್ಲಿ ಇರುವ ಸಮಯ ಗೂಗಲ್ ಪೇ ಗೆ ಹಣ ಜಮಾ ಆದ ಬಗ್ಗೆ ಸಂದೇಶ ಬಂದಿರುವುದನ್ನು ನೋಡಿದಾಗ GROWW VERIFICATION ಎಂಬ ಹೆಸರಿನಲ್ಲಿ 0.01 ಮೊತ್ತ ಜಮಾಗೊಂಡಿರುವುದು ಕಂಡು ಬಂದಿತ್ತು. ಅವರು ಈ ಸಂದೇಶವನ್ನು ತೆರೆದ ಬಳಿಕ ಸಂಜೆ your channel limit has been modified successfully and will be effective from 09/10/2026 ಎಂಬುದಾಗಿ ಸಂದೇಶ ಬಂದಿತ್ತು. ಬಳಿಕ ಅವರ ಖಾತೆಯಿಂದ ಕ್ರಮವಾಗಿ 1,25,091.15, 45,926.69 ರೂ., 40,966.82 ರೂ., 26,139.77 ರೂ. ಹಾಗೂ 6,175.30 ರೂ. ನಂತೆ ಒಟ್ಟು 2,49,299.73 ರೂ. ಕಡಿತಗೊಂಡಿತ್ತು. ವಾಸು ಶೆಟ್ಟಿ ಅವರು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ : ಸರಣಿ ಅಪಘಾತ ; ಇಬ್ಬರು ದ್ವಿಚಕ್ರ ವಾಹನ ಸವಾರರು ಸಾವು – vishwanews24
